Rashmika : ಟ್ರೋಲ್ ಗಳಿಂದ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ರಶ್ಮಿಕಾ ಬಹಿರಂಗ ಪತ್ರ..!!
ಸ್ಯಾಂಡಲ್ ವುಡ್ ಮೂಲಕ ಕಿರಿಕ್ ಪಾರ್ಟಿ ಸಿನಿಮಾದಿಂದ ಹಿಟ್ ಆಗಿ ಸದ್ಯ ಟಾಲಿವುಡ್ , ಬಾಲಿವುಡ್ , ಕಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ರಶ್ಮಿಕಾಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದ್ದು , ಸೌತ್ ನಟಿಯರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಒಬ್ಬರು..
ಆದ್ರೆ ಟ್ರೋಲ್ ಗಳಿಗೆ ರಶ್ಮಿಕಾ ಮಾತ್ರ ಅಷ್ಟಾಗಿ ತಲೆ ಕೆಡಿಸಿಕೊಳ್ತಿರಲಿಲ್ಲ. ಆದ್ರೆ ಅದ್ಯಾಕೋ ಈಗ ಸಾನ್ವಿ ಸಿಕ್ಕಾಪಟ್ಟೆ ಬೇಸರಬಂದುಬಿಟ್ಟಿದೆ..
ಬಹಿರಂಗವಾಗಿ ಪತ್ರಬರೆದು ಬೇಸರ ಹೊರಹಾಕಿದ್ದಾರೆ..
ಇಂಗ್ಲಿಷ್ ನಲ್ಲಿ ಪತ್ರಬರೆದಿರುವ ಟಾಲಿವುಡ್ ನಟಿ ರಶ್ಮಿಕಾ ,
ಟ್ರೋಲಿಗರನ್ನ ಪ್ರಶ್ನೆ ಮಾಡಿ ತಮಗಾಗುತ್ತಿರುವ ತೊಂದರೆ ಬಗ್ಗೆಯೂ ಹೇಳಿಕೊಂಡಿದ್ದಾರೆ..
” ಕೆಲವು ದಿನ, ವಾರ, ತಿಂಗಳು ವರ್ಷಗಳಿಂದಲೂ ಕೆಲವು ವಿಷಯಗಳು ನನಗೆ ಸಮಸ್ಯೆ ನೀಡುತ್ತಿವೆ. ಈ ವಿಷಯದ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು. ಆದರೆ ಈಗ ಆ ನಿರ್ಣಯ ಮಾಡಿದ್ದೇನೆ. ನಾನು ನನ್ನ ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ಸಾಕಷ್ಟು ದ್ವೇಷ, ನಿಂದನೆಗಳನ್ನು ಸ್ವೀಕರಿಸುತ್ತಲೇ ಬಂದಿದ್ದೇನೆ. ಕೆಲವು ಟ್ರೋಲರ್ ಗಳಿಗಂತೂ ನಾನು ಒಂದು ರೀತಿ ಪಂಚಿಂಗ್ ಬ್ಯಾಗ್ ಆಗಿದ್ದೇನೆ. ಸಾಕಷ್ಟು ನೆಗೆಟಿವಿಟಿಯನ್ನೇ ನಾನು ಪಡೆಯುತ್ತಲೇ ಬಂದಿದ್ದೇನೆ.. ”
”ನಾನು ಆಯ್ದುಕೊಂಡಿರುವ ಈ ವೃತ್ತಿ ಜೀವನಕ್ಕೆ ತೆರಬೇಕಾದ ಮೌಲ್ಯವಿದು ಎಂಬುದು ನನಗೆ ಗೊತ್ತಿದೆ. ಎಲ್ಲರೂ ನನ್ನ ಪ್ರೀತಿಸಬೇಕು ಎಂದುಕೊಳ್ಳುವುದು ಸಹ ತಪ್ಪು ಎಂಬುದು ನನಗೆ ಅರಿವಿದೆ. ಆದರೆ, ನಾನು ನಿಮಗೆ ಹಿಡಿಸಲಿಲ್ಲ ಎಂದ ಕೂಡಲೇ ನನ್ನ ಬಗ್ಗೆ ಟ್ರೋಲ್ ಮಾಡಬೇಕು ನನ್ನ ದ್ವೇಷಿಸಬೇಕೆಂದೇನಿಲ್ಲವಲ್ಲ..
ನಿಮ್ಮನ್ನೆಲ್ಲ ಮನರಂಜಿಸಲು ನಾನು ಪ್ರತಿದಿನ ಎಷ್ಟು ಕಷ್ಟಪಡುತ್ತೇನೆ ಎಂಬುದು ನನಗೆ ಮಾತ್ರವೆ ತಿಳಿದಿದೆ. ನಾನು ಮಾಡುವ ಕೆಲಸದಿಂದ ನೀವು ಅನುಭವಿಸುವ ಖುಷಿ ನನಗೆ ಬಹು ಮುಖ್ಯ. ಅದಕ್ಕಾಗಿಯೇ ನಾನು ಪ್ರತಿದಿನ ಶ್ರಮಪಡುತ್ತಿದ್ದೇನೆ. ನೀವು ಮತ್ತು ನಾನು ಇಬ್ಬರೂ ಹೆಮ್ಮೆ ಪಡುವಂಥಹ ಕೆಲಸ ಮಾಡಬೇಕೆಂದು ಪ್ರಯತ್ನಿಸುತ್ತಲೇ ಇದ್ದೀನಿ.. ‘
“ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಅಪಹಾಸ್ಯ ಮಾಡಲಾಗ್ತದೆ.. ನಾನು ಹೇಳದ ವಿಷಯಕ್ಕಾಗಿ ನನ್ನನ್ನು ಕೆಟ್ಟದಾಗಿ ಟೀಕೆ ಮಾಡಲಾಗ್ತದೆ.. ನನ್ನ ಹೇಳಿಕೆಯನ್ನ ತಿರುಚಿ ನನ್ನ ವಿರುದ್ಧ ಆಕ್ರೋಶ ಹೊರಹಾಕಲಾಗ್ತದೆ.. ನನಗೆ ಹೃದಯ ಒಡೆದಂತೆ ಎನಿಸುತ್ತದೆ. ಸಂದರ್ಶನಗಳಲ್ಲಿ ನಾನು ಹೇಳಿದ ಕೆಲವು ವಿಷಯಗಳನ್ನು ತಿರುಚಿ ಬೇರೆ ರೂಪ ಕೊಟ್ಟು ಹೇಳಲಾಗಿದೆ.. ನಾನು ಬೇರೆ ಅರ್ಥದಲ್ಲಿ ಹೇಳಿದ ವಿಷಯಗಳನ್ನು ನನ್ನ ಚಾರಿತ್ರ್ಯಹರಣಕ್ಕೆ ಬಳಸಲಾಗಿದೆ.. ನಾನು ಹೇಳದ ವಿಷಯಗಳನ್ನು ಹೇಳಿದ್ದಾಗಿ ಪ್ರಕಟಿಸುವುದು. ಇದರಿಂದ ನನ್ನ ವೈಯಕ್ತಿಕ ಸಂಬಂಧ ಹಾಗೂ ವೃತ್ತಿ ಸಂಬಂಧ ಹದಗೆಡುತ್ತದೆ”
”ನನ್ನ ಬಗ್ಗೆ ಮಾಡಲಾಗುವ ರಚನಾತ್ಮಕ ಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ. ಆ ರೀತಿಯ ಟೀಕೆಗಳಿಂದ ನಾನು ತಪ್ಪು ತಿದ್ದಿಕೊಂಡು ಬೆಳೆಯುತ್ತೇನೆ.. ಆದರೆ ನೆಗೆಟಿವಿಟಿಯಿಂದ ಯಾವುದೇ ಲಾಭ ಇಲ್ಲ. ಇಂಥಹುದನ್ನ ನಿರ್ಲಕ್ಷಿಸು ಎಂದೇ ನನಗೆ ಹೇಳಲಾಗುತ್ತಿತ್ತು, ನಾನೂ ಹಾಗೆಯೇ ಮಾಡುತ್ತಲೇ ಬಂದೆ. ಆದರೆ ಅದು ಇನ್ನಷ್ಟು-ಮತ್ತಷ್ಟು ಹೆಚ್ಚಾಗುತ್ತಾ ಸಾಗಿದೆ. ಈಗ ಅದರ ಬಗ್ಗೆ ಮಾತನಾಡಿ, ನಾನು ಯಾರನ್ನೂ ಮೆಚ್ಚಿಸುವ ಅಥವ ಮನಗೆಲ್ಲುವ ಪ್ರಯತ್ನ ಮಾಡುತ್ತಿಲ್ಲ. ನಾನು ಸ್ವೀಕರಿಸುತ್ತಿರುವ ಈ ದ್ವೇಷ ನನ್ನ ವ್ಯಕ್ತಿತ್ವವನ್ನು ಕೆಟ್ಟ ರೀತಿಯಲ್ಲಿ ಬದಲಾಯಿಸುವುದು ನನಗೆ ಇಷ್ಟವಿಲ್ಲ”
”ಕೆಟ್ಟ ಮಾತುಗಳ ನಡುವೆ, ಒಳ್ಳೆಯ ಮಾತುಗಳನ್ನಾಡಿರುವುದನ್ನೂ ನಾನು ಗಮನಿಸಿದ್ದೇನೆ. ಕೆಲವರಿಂದ ಸ್ವೀಕರಿಸಿರುವ ಪ್ರೀತಿಯನ್ನೂ ನಾನು ಗೌರವಿಸುತ್ತೇನೆ. ನಿಮ್ಮ ಸತತ ಪ್ರೀತಿಯೇ ನಾನು ಮುಂದಕ್ಕೆ ಸಾಗುವಂತೆ ಮಾಡಿದೆ, ಹಾಗೂ ಇಂದು ಈ ವಿಷಯವನ್ನು ಎಲ್ಲರ ಜೊತೆಗೆ ಹಂಚಿಕೊಳ್ಳುವ ಧೈರ್ಯ ನೀಡಿದೆ. ಬೇರೆಯವರಿಗೆ ಪ್ರೀತಿಯನ್ನು ಮಾತ್ರವೇ ನೀಡುತ್ತಲೇ ಸಾಗುತ್ತೇನೆ ನಾನು. ಈವರೆಗೆ ನಾನು ಕೆಲಸ ಮಾಡಿದ ಎಲ್ಲರನ್ನೂ ನಾನು ಗೌರವದಿಂದ ಕಂಡಿದ್ದೇನೆ. ಸದಾ ಕಷ್ಟಪಟ್ಟು ಕೆಲಸ ಮಾಡುವುದನ್ನು ನಾನು ಮುಂದುವರೆಸುತ್ತೇನೆ. ನೀವು ಖುಷಿ ಪಟ್ಟರಷ್ಟೆ ಅದು ನನಗೆ ಖುಷಿ ನೀಡುತ್ತದೆ. ದಯವಿಟ್ಟು ಎಲ್ಲರಿಗೂ ದಯೆ ತೋರಿಸಿ, ನಾವೆಲ್ಲರೂ ಒಳ್ಳೆಯ ಕಾರ್ಯವನ್ನು ಮಾಡುವ ಪ್ರಯತ್ನದಲ್ಲಿದ್ದೇವೆ” ಎಂದಿದ್ದಾರೆ..
ಆದ್ರೆ ಅವರ ಪೋಸ್ಟ್ ಗೂ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳು ಬಂದಿವೆ.. ಜೊತೆಗೆ ರಶ್ಮಿಕಾ ಪರ ಅಭಿಮಾನಿಗಳು ಹಾಗೂ ದುಲ್ಕರ್ ಸಲ್ಮಾನ್ ಸೇರಿದಂತೆ ಸೆಲೆಬ್ರಟಿಗಳು ಕಾಮೆಂಟ್ ಮಾಡಿ ಬೆಂಬಲಿಸಿದ್ದಾರೆ..