Urfi Javed : ಉರ್ಫಿ ವಿರುದ್ಧ ದೂರು ದಾಖಲು – ‘ನನ್ನ ಬಟ್ಟೆ ನನ್ನಿಷ್ಟ , ತೊಂದ್ರೆಯಾದ್ರೆ ಕಣ್ಮುಚ್ಚಿಕೊಳ್ಳಿ’ ಎಂದ ಸೋಷಿಯಲ್ ಮೀಡಿಯಾ ಸೆನ್ಷೇಷನ್ ಉರ್ಫಿ..!!
ಉರ್ಫಿ ಜಾವೇದ್ ಅಶ್ಲೀಲ ಫ್ಯಾಷನ್ ನಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ವಾಘ್ತಿರುತ್ತಾರೆ.. ಫ್ಯಾಷನ್ ಎಂದ್ರೇನೇ ಒಂದ್ರೀತಿ ಅಶ್ಲೀವಾಗಿ ಕಾಣಿಸಿಕೊಳ್ಳೋದು ಎಂಬ ರೀತಿ ಬಟ್ಟೆ ಧರಿಸುತ್ತಾರೆ.. ಅದ್ರಲ್ಲೂ ಇತ್ತೀಚೆಗೆ ಅವರ ವಿರುದ್ಧ ಕೇಸ್ ದಾಖಲು ಮಾಡಿದಾಗಿನಿಂದ ನ್ನುಷ್ಟು ಓವರ್ ಮಾಡುತ್ತಿದ್ದಾರೆ..
ಟ್ರೋಲ್ ಆದ್ರೂ ಮಾಡ್ಲಿ ದೂರಾದ್ರೂ ಕೊಡಲಿ ಐ ಡೋಂಟ್ ಕೇರ್ ಅಂತ ಬಿಕಿನಿಯಲ್ಲೇ ಹೊರಗೆ ಬಂದು ಮತ್ತಷ್ಟು ನೆಟ್ಟಿಗರ ಕಣ್ಕೆಂಪಾಗಿಸಿದ್ದಾರೆ..
ಉರ್ಫಿ ಜಾವೇದ್ ಮುಂಬೈ ಬೀದಿಯಲ್ಲಿ ಬಿಕಿನಿ ಧರಿಸಿ ಓಡಾಡಿದರು ಎನ್ನುವ ಕಾರಣಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಅತ್ಯಾಚಾರಿಗಳ ಮೇಲೆ ದೂರು ಕೊಡಿ, ನನ್ನ ಮೇಲಲ್ಲ ಎಂದು ದೂರು ನೀಡಿದವರು ವಿರುದ್ಧ ಕಿಡಿಕಾರಿದ್ದಾರೆ..
ನನ್ನ ದೇಹ, ನನ್ನ ಬಟ್ಟೆ.. ಯಾವ ರೀತಿಯಾದರೂ ಧರಿಸುತ್ತೇನೆ. ನಿಮಗೇನು ಸಮಸ್ಯೆ ಎಂದು ಕೇಳಿದ್ದಾರೆ.
ನಾನು ತಾಲಿಬಾನ್ ನಲ್ಲಿ ವಾಸಿಸುತ್ತಿಲ್ಲ. ಭಾರತದಲ್ಲಿ ಬದುಕುತ್ತಿರುವೆ. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ನಮಗಿಷ್ಟ ಬಂದಂತೆ ಬಟ್ಟೆ ಧರಿಸಲು ಅವಕಾಶವಿಲ್ಲವಾ..??? ಎಂದು ಪ್ರಶ್ನಿಸಿದ್ದಾರೆ..
ಬಿಕಿನಿ ಧರಿಸಿದರೆ ನಿಮಗೆ ಸಮಸ್ಯೆ ಆಗುತ್ತದೆ ಅಂತಾದರೆ ಕಣ್ಣು ಮುಚ್ಚಿಕೊಂಡು ಓಡಾಡಿ ಎಂದೂ ಹೇಳಿದ್ದಾರೆ..