Kangana : ಇನ್ಸ್ಟಾಗ್ರಾಮ್ ವೇಸ್ಟ್ ಅಂತ Instagram ನಲ್ಲೇ ಹೇಳಿದ ಕಂಗನಾ..!!
kangana : ಸದಾ ಸುದ್ದಿಯಲ್ಲೇ ಇರುವ , ವಿವಾದಗಳನ್ನ ಮಾಡಿಕೊಳ್ತಾ ಬಾಲಿವುಡ್ ಮಂದಿ ವಿರುದ್ಧವೇ ಮಾತನಾಡುತ್ತಾ , ರಾಜಕೀಯವಾಗಿಯೂ ಚರ್ಚೆಯಾಗುತ್ತಾ ಇರುವ ನಟಿ ಅಂದ್ರೆ ಅದು ಕಂಗನಾ ರಣೌತ್..
ಟ್ವಿಟ್ಟರ್ ನಲ್ಲಿ ಸಲ್ಲದ ಕೆಲ ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಕಂಗನಾರ ಖಾತೆಯನ್ನ ಬ್ಲಾಕ್ ಮಾಡಲಾಗಿತ್ತು.. ಆದ್ರೀಗ ಕಂಗನಾಗೆ ತಮ್ಮ ಟ್ವಿಟ್ಟರ್ ( #Twitter ) ಖಾತೆ ವಾಪಸ್ ಸಿಕ್ಕಿದೆ.. ಅದು ಕೂಡ ಎಲಾನ್ ಮಸ್ಕ್ ಅವರ ಸ್ವಾಧೀನಕ್ಕೆ ಟ್ವಿಟ್ಟರ್ ಹೋದ ಬಳಿಕ..
ಅಂದ್ಹಾಗೆ ಕಂಗನಾ ಅವರು ಇನ್ಸ್ಟಾದಲ್ಲೂ ತಮ್ಮ ಚಾಳಿ ಮುಂದುವರೆಸಿದ್ದರು.. ಅಲ್ಲಿಯೂ ಕೆಲ ಪ್ರಚೋದನಕಾರಿ ಫೋಸ್ಟ್ ಗಳನ್ನ ಹಾಕ್ತಿದ್ದರು.. ಹೀಗೆಯೇ ಅವರು ಮಾಡಿದ್ದ ಪೋಸ್ಟ್ ಒಂದನ್ನ Instagram ಡಿಲೀಟ್ ಮಾಡಿಹಾಕಿತ್ತು… ಇದ್ರಿಂದ ಕಂಗನಾ ಸಿಕ್ಕಾಪಟ್ಟೆ ಗರಂ ಆಗಿದ್ದರು..
ಇದೀಗ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲೇ ಇನ್ಸ್ಟಾಗ್ರಾಮ್ ವೇಸ್ಟ್ ಎಂದು ಬರೆದು ಎಲ್ಲರೂ ಉಬ್ಬೇರಿಸುವಂತೆ ಮಾಡಿದ್ಧಾರೆ ಬಾಲಿವುಡ್ ನ ಕಾಂಟ್ರವರ್ಸಿ ‘ಕ್ವೀನ್’..!!
” ಮೂಕ Insatagram ಬರೀ ( Photos) ಫೋಟೊಗಳನ್ನು ಶೇರ್ ಮಾಡಲು ಅಷ್ಟೆ ಲಾಯಕ್ಕು. ಮಹತ್ತರವಾದ ( Important) ಸಮಾಚಾರವನ್ನು ಇದರಲ್ಲಿ ಉಳಿಸಲು ಸಾಧ್ಯವಿಲ್ಲ. ಯಾರಾದರೂ ತಮ್ಮ ಅಭಿಪ್ರಾಯ ( opinion) ಹಂಚಿಕೊಂಡರೆ ಮರುದಿನ ಅದು ಕಾಣುವುದಿಲ್ಲ. ಇದರಿಂದ ನಮ್ಮ ಆಲೋಚನೆಯನ್ನು ಡಾಕ್ಯುಮೆಂಟ್ ( Document) ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ.
ನಾವು ಏನು ಹೇಳಿದ್ವಿ, ಏನು ಬರೆದಿದ್ದೇವೆ ಎನ್ನುವ ಪರಿಜ್ಞಾನ ಇಲ್ಲದವರಿಗೆ ಇದು ಉತ್ತಮವಾದ ವೇದಿಕೆ ( Stage / Platform). ಆದರೆ ನಮ್ಮಂತಹವರ ಪರಿಸ್ಥಿತಿ ಏನು..?? ಶೇರ್ ಮಾಡಿದ ಖಚಿತವಾದ ವಿಷಯಗಳನ್ನು ಸೇವ್ ಮಾಡಬೇಕಿದ್ದರೆ..? ನಮ್ಮ ಆಲೋಚನೆಗಳನ್ನು ಆಳವಾಗಿ ಇತರರ ಜೊತೆ ಹಂಚಿಕೊಳ್ಳಬೇಕಾದರೆ ಹೇಗೆ?” ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ಬರೆದುಕೊಂಡಿದ್ದಾರೆ.