Kantara : ಉದ್ಯಮಿಗಳೂ ಕಾಂತಾರಗೆ ಫಿದಾ..!!
ಕಾಂತಾರವನ್ನ ರಾಜಕಾರಣಿಗಳು ,ಸೆಲೆಬ್ರಿಟಿಗಳು , ಪರ ಭಾಷಾ ಸ್ಟಾರ್ ಗಳು , ಅಭಿಮಾನಿಗಳು , ಪರ ಭಾಷಾ ಪ್ರೇಕ್ಷಕರೂ ಮೆಚ್ಚಿಕೊಂಡಿದ್ಧಾರೆ.. ಇದೀಗ ಸಿನಿಮಾ ವೀಕ್ಷಿಸಿದ Zerodha ಸ್ಥಾಪಕ ಮತ್ತು CEO ನಿತಿನ್ ಕಾಮತ್ ಅವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ಈ ಸಿನಿಮಾ ತನಗೆ ಹೆಮ್ಮೆಯ ಕನ್ನಡಿಗನೆಂಬ ಭಾವನೆ ಮೂಡಿಸಿದೆ ಎಂದು ಹೇಳಿದರು.
ಇದನ್ನು ‘ನೋಡಲೇಬೇಕು’ ಎಂದು ಕರೆ ನೀಡಿರುವ ಉದ್ಯಮಿ, ಚಿತ್ರದ ಕೊನೆಯ 30 ನಿಮಿಷಗಳಿಂದ ನನಗೆ ಗೂಸ್ ಬಂಪ್ ಬಂದಿತ್ತು ಎಂದಿದ್ದಾರೆ..
ಅಲ್ಲದೇ ರಿಷಬ್ ಶೆಟ್ಟಿ ಅವರು ಕಾಮತ್ ಅವರಿಗೆ ಧನ್ಯವಾದ ಅರ್ಪಿಸಲು ಹೃದಯದ ಎಮೋಜಿಯನ್ನು ಹಾಕಿದರು.