Kantara : ವರಾಹ ರೂಪಂ ಹಾಡು ಡಿಲೀಟ್..!!
ಕಾಂತಾರವನ್ನ ರಾಜಕಾರಣಿಗಳು ,ಸೆಲೆಬ್ರಿಟಿಗಳು , ಪರ ಭಾಷಾ ಸ್ಟಾರ್ ಗಳು , ಅಭಿಮಾನಿಗಳು , ಪರ ಭಾಷಾ ಪ್ರೇಕ್ಷಕರೂ ಮೆಚ್ಚಿಕೊಂಡಿದ್ಧಾರೆ..
ಬಾಕ್ಸ್ ಆಫೀಸ್ ಲೂಟಿ ಮಾಡ್ತಿದೆ.. ಪರ ಭಾಷೆಗಳಲ್ಲೂ ಅಬ್ಬರಿಸುತ್ತಿದ್ದು , ರಾಜಕೀಯ ಗಣ್ಯರು , ಎಲ್ಲಾ ಭಾಷೆಯ ಸ್ಟಾರ್ ಗಳಿಂದ ಸಿನಿಮಾ ಮೆಚ್ಚುಗೆ ಪಡೆಯುತ್ತಾ ದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದೆ.. ರಿಷಬ್ ಶೆಟ್ಟಿ ನಿರ್ದೇಶಿಸಿ , ನಟಿಸಿ , ಹೊಂಬಾಳೆ ಫಿಲಮ್ಸ್ ನಿರ್ಮಿಸಿರು ಸಿನಿಮಾದಲ್ಲಿ ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಮೋಡಿ ಮಾಡಿದೆ.. ಅದ್ರಲ್ಲೂ ಸಿನಿಮಾದ ಕೊನೆಯಲ್ಲಿ ಬರುವ ವರಾಹ ರೂಪಂ ಹಾಡಿಗಂತೂ ಜನರು ಫಿದಾ ಆಗಿದ್ದಾರೆ..
ಕೇರಳದ ಸ್ಥಳೀಯ ನ್ಯಾಯಾಲಯ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು ನೋಟಿಸ್ ನೀಡಿತ್ತು.
ನವರಸಮ್ ಎಂಬ ಆಲ್ಬಂ ಹಾಡಿನ ಟ್ಯೂನ್ ಅನ್ನು ಕಾಂತಾರ ಚಿತ್ರದ ವರಾಹ ರೂಪಂ ಹಾಡಿನಲ್ಲಿ ಕಾಪಿ ಮಾಡಲಾಗಿದೆ ಎಂದು ತೈಕ್ಕುಡಂ ಬ್ರಿಡ್ಜ್ ಹಾಗೂ ಕಪ್ಪ ಟಿವಿ ದೂರನ್ನು ನೀಡಿದ್ದವು.