Samantha : ಜಿಲೇಬಿ ಕೊಟ್ಟಿದ್ದಕ್ಕೆ ಭಾವುಕರಾದ ಸಮಂತಾ..!!! ಅಪ್ಪಿ ಥ್ಯಾಂಕ್ಸ್ ಹೇಳಿದ್ಯಾರಿಗೆ..??
ಟಾಲಿವುಡ್ ಬಹು ಬೇಡಿಕೆಯ ನಟಿ ಸಮಂತಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಖಾಯಿಲೆ ಬಗ್ಗೆ , ಸಮಂತಾ ಆರೋಗ್ಯದ ಬಗ್ಗೆ ಸಾಕಷ್ಟು ಗೊಂದಲಗಳಿದೆ.. ವದಂತಿಗಳೂ ಕೂಡ ಹರಿದಾಡ್ತಿದೆ..
ಈ ನಡುವೆಯೂ ಸಮಂತಾ ಇದೇ ತಿಂಗಳ 11 ರಂದು ರಿಲೀಸ್ ಆದ ಯಶೋಧಾ ಸಿನಿಮಾವನ್ನ ಪ್ರಚಾರ ಮಾಡಿದ್ದು , ಸಿನಿಮಾ ಸೂಪರ್ ಸಕ್ಸಸ್ ಕಾಣ್ತಿದೆ.. ಸಮಂತಾ ನಟನೆಯನ್ನ ಅಭಿಮಾನಿಗಳು ಕೊಂಡಾಡುತ್ತಿದ್ದು , ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ..
View this post on Instagram
ಅಂದ್ಹಾಗೆ ಸಮಂತಾ ಕಾಯಿಲೆಗೆ ತುತ್ತಾಗಿದ್ದರೂ ವರ್ಕೌಟ್ ಮಾಡ್ತಿದ್ದಾರೆ..
ಅತಿಯಾದ ವರ್ಕೌಟ್ನಿಂದ ಸಮಂತಾ ಮಯೋಸೈಟಿಸ್ ಸಮಸ್ಯೆಗೆ ತುತ್ತಾದರಾ ಎನ್ನುವ ಸಂಶಯವನ್ನು ಕೂಡ ಕೆಲವರು ವ್ಯಕ್ತಪಡಿಸಿದ್ದರು.
ಆದ್ರೆ ಸಮಂತಾ ಮಾತ್ರ ವರ್ಕೌಟ್ ಮಾಡುವುದನ್ನ ನಿಲ್ಲಿಸಿಲ್ಲ..
ಜಿಮ್ ನಲ್ಲಿ ಕಸರತ್ತು ನಡೆಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಅಂದ್ಹಾಗೆ ಸಿನಿಮಾ ತಾರೆಯರು ವರ್ಕೌಟ್ ಜೊತೆಗೆ ಪ್ರಾಪರ್ ಡಯೇಟ್ ಕೂಡ ಮೇಂಟೇನ್ ಮಾಡ್ತಾರೆ.. ಅದ್ರಲ್ಲೂ ಸ್ವೀಟ್ಸ್ ಗಳಿಂದ ದೂರವೇ ಇರುತ್ತಾರೆ..
ಅಂತೆಯೇ ಸಮಂತಾ ಅವರಿಗೆ ಅವರ ಕೋಚ್ ಅವರ ಇಷ್ಟದ ಜಿಲೇಬಿ ತಿನ್ನದಂತೆ ಇಷ್ಟು ದಿನ ತಡೆಯುತ್ತಿದ್ದರು..
ಇದೀಗ ಸಮಂತಾರ ಕೋಚ್ ಅವರೇ ಖುದ್ದು ಯಶೋಧಾ ಸಕ್ಸಸ್ ಸಂತಸದಲ್ಲಿ ಸಮಂತಾಗೆ ಜೆಲೇಬಿ ತಂದುಕೊಟ್ಟಿದ್ದು , ಸ್ಯಾಮ್ ಭಾವುಕರಾಗಿ , ಥ್ಯಾಂಕ್ಸ್ ಎಂದು ಕೋಚ್ ಜೊತೆಗಿನ ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ…
ನಾನು ನನ್ನಿಷ್ಟದ ಜಿಲೇಬಿ ತಿನ್ನಲು ಅರ್ಹಳಾಗಲು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದು ಜುನೈದ್ ಎಂದಿಗೂ ಯೋಚಿಸಿರಲಿಲ್ಲ. ಆದರೆ ಯಶೋದ ಚಿತ್ರದ ಸಕ್ಸಸ್ ಅದರಲ್ಲೂ ಆಕ್ಷನ್ ಸೀಕ್ವೆನ್ಸ್ ನೋಡಿ ನನಗೆ ಜಿಲೇಬಿ ತಂದುಕೊಟ್ಟಿದ್ದಾನೆ ಎಂದು ಸಮಂತಾ ಇನ್ ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.