Sharukh Khan : ದುಬೈನಿಂದ ಭಾರತಕ್ಕೆ ಕಾಲಿಟ್ಟ ಶಾರುಖ್ ಗೆ ಶಾಕ್..!!! ಲಕ್ಷಾಂತರ ರೂ. ದಂಡ..!!
ಮುಂಬೈ : ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಶನಿವಾರ ದುಬೈನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು , ಅವರಿಗೆ ಅಧಿಕಾರಿಗಳು ಬರೋಬ್ಬರಿ 6.83 ದಂಡ ವಿಧಿಸಿದ್ದಾರೆ..
ಶಾರುಖ್ ಖಾನ್ ಒಂದು ದಿನ ಹಿಂದೆಯಷ್ಟೆ ದುಬೈನ ಶಾರ್ಜಾನಲ್ಲಿ ನಡೆದ ಬುಕ್ ಫೇರ್ ನಲ್ಲಿ ಭಾಗವಹಿಸಿ, ಅಲ್ಲಿ ಪ್ರತಿಷ್ಠಿತ ಪ್ರಶಸ್ತಿಗೆ ಸಹ ಭಾಜನರಾಗಿದ್ದಾರೆ.
ಅಲ್ಲಿಂದ ಹಿಂತಿರುಗಿ ಬರುವಾಗ ಮಹಾರಾಷ್ಟ್ರದ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅವರನ್ನು ತಡೆದಿದ್ದಾರೆ. ಶಾರ್ಜಾದಿಂದ ಎಮರೈಟ್ಸ್ ವಿಮಾನದಲ್ಲಿ ವಾಪಸ್ಸಾದ ಶಾರುಖ್ ಖಾನ್, ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಬಾಡಿಗಾರ್ಡ್ ರವಿ ಹಾಗೂ ಶಾರುಖ್ ಖಾನ್ರ ಇತರೆ ಸಿಬ್ಬಂದಿಗಳನ್ನು ಮುಂಬೈನ ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದು ಅವರ ಬ್ಯಾಗುಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.
ಈ ಸಮಯದಲ್ಲಿ ಶಾರುಖ್ ಖಾನ್ ಗೆ ಸೇರಿದ ಬ್ಯಾಗಿನಲ್ಲಿ ದುಬಾರಿ ವಾಚುಗಳು ದೊರೆತಿದ್ದು, ಅವಕ್ಕೆ ಸೂಕ್ತ ದಾಖಲೆಗಳು ಇರಲಿಲ್ಲ ಎನ್ನಲಾಗುತ್ತಿದೆ. ಶಾರುಖ್ ಖಾನ್ಗೆ ಸೇರಿದ ಬ್ಯಾಗಿನಲ್ಲಿ ದುಬಾರಿ ಬ್ರ್ಯಾಂಡ್
ಗಳಾದ ಎಸ್ ಪಿರೆಂಟ್, ಬಬೂನ್ ಆಂಡ್ ಜುರ್ಬಕ್, ಆಪರ್ ಸರಣಿ ವಾಚ್ಗಳು ಪತ್ತೆಯಾಗಿವೆ. ಈ ವಾಚುಗಳ ಒಟ್ಟು ಮೌಲ್ಯ ಸುಮಾರು 17.50 ಲಕ್ಷ ಆಗುತ್ತದೆ. ಇವುಗಳ ಜೊತೆಗೆ ದುಬಾರಿ ವಾಚು ಬ್ರ್ಯಾಂಡ್ ಆದ ರೋಲೆಕ್ಸ್ ನ ಖಾಲಿ ಬಾಕ್ಸ್ ಗಳು ಸಹ ಪತ್ತೆಯಾಗಿದೆ.
ಶಾರುಖ್ ಖಾನ್ ಹಾಗೂ ಅವರ ಸಿಬ್ಬಂದಿಯನ್ನು ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಸಿದ ಮುಂಬೈನ ಕಸ್ಟಮ್ಸ್ ಅಧಿಕಾರಿಗಳು ಕೊನೆಗೆ ಶಾರುಖ್ ಖಾನ್ ಅವರಿಂದ 6.83 ಲಕ್ಷ ಕಸ್ಟಮ್ಸ್ ತೆರಿಗೆಯನ್ನು ಪಾವತಿ ಮಾಡಿಸಿಕೊಂಡಿದ್ದಾರೆ. ಒಂದು ಗಂಟೆ ಬಳಿಕ ಶಾರುಖ್ ಹಾಗೂ ಮ್ಯಾನೇಜರ್ ಪೂಜಾ ವಿಮಾನ ನಿಲ್ದಾಣ ತೊರೆದಿದ್ದಾರೆ ಆದರೆ ಅವರ ಬಾಡಿಗಾರ್ಡ್ ರವಿ ಹಾಗೂ ಇತರ ಸಿಬ್ಬಂದಿಗಳು ತಡವಾಗಿ ವಿಮಾನ ನಿಲ್ದಾಣದಿಂದ ಹೊರನಡೆದಿದ್ದಾರೆ..