Kerala : ಚಲಿಸುತ್ತಿದ್ದ ಕಾರಿನಲ್ಲಿಯೇ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ
ಕೇರಳದಲ್ಲಿ 19 ವರ್ಷದ ಮಾಡೆಲ್ ಒಬ್ಬರ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ನಡೆದ ಹೇಯ ಕೃತ್ಯ ಬೆಳಕಿಗೆ ಬಂದಿದೆ..
( ನವೆಂಬರ್ 17) ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ..
ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಪೊಲೀಸರನ್ನ ಬಂಧಿಸಿ ಓರ್ವ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಚ್ಚಿನ್ ಶಿಪ್ಯಾರ್ಡ್ ಬಳಿಯ ಪಬ್ ಗೆ ಭೇಟಿ ನೀಡಿದ್ದ ಮಾಡೆಲ್, ರಾತ್ರಿ ಕುಡಿದಿದ್ದರು. ಈ ವೇಳೆ ಆರೋಪಿಗಳು ಕಾಕ್ಕನಾಡ್ ನಲ್ಲಿರುವ ಆಕೆಯ ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡಿದ್ದಾರೆ. ನಂತರ ದಾರಿ ಮಧ್ಯೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ತಡರಾತ್ರಿ ನಗರವೆಲ್ಲಾ ಸುತ್ತಾಡುತ್ತಾ ಚಲಿಸುತ್ತಿದ್ದ ಕಾರಿನಲ್ಲಿಯೇ ಮಾಡೆಲ್ ಮೇಲೆ ಅತ್ಯಾಚಾರವೆಸಗಿ, ನಂತರ ಹಲ್ಲೆ ನಡೆಸಿ ಆಕೆಯನ್ನು ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ..
ಇದೀಗ ವೈದ್ಯಕೀಯ ಚಿಕಿತ್ಸೆಯಲ್ಲಿ ಸಾಮೂಹಿಕ ಅತ್ಯಾಚಾರವಾಗಿರುವುದು ಧೃಢವಾಗಿದೆ..