Sagar – Siri : ‘ಸತ್ಯ’ ಧಾರಾವಹಿಯ ಸಾಗರ್ ಎಂಗೇಜ್ ಮೆಂಟ್..!!
ಕಿರುತೆರೆಯ ಖ್ಯಾತ ನಟ ಸತ್ಯ ಧಾರಾವಾಹಿ ಮೂಲಕವೇ ಫೇಮಸ್ ಆಗಿರುವ ಚಾಕೊಲೇಟ್ ಬಾಯ್ ಸಾಗರ್ ಗೌಡ ಸದ್ಯ ತಮ್ಮ ಬಹುಕಾಲದ ಗೆಳತಿ ಸಿರಿ ರಾಜು ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ,..
ಇಬ್ಬರ ಎಂಗೇಜ್ ಮೆಂಟ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಸತ್ತಯ ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ಗೌಡ ಪಾತ್ರದಲ್ಲಿ ನಟಿಸಿ ಅಮೂಲ್ ಬೇಬಿ ಎಂದೇ ಜನಪ್ರಿಯತೆ ಗಳಿಸಿದ್ದಾರೆ..
ಐದು ವರ್ಷಗಳಿಂದ ಪ್ರೀತಿಸಿ ಇದೀಗ ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಖುಷಿಪಟ್ಟಿದ್ದಾರೆ..
ಇವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹಲವು ಕಿರುತೆರೆ ನಟ , ನಟಿಯರು , ಸತ್ಯ ಧಾರಾವಾಹಿಯ ತಂಡದವರೂ ಭಾಗವಹಿಸಿದ್ದರು,..
ಸಾಗರ್ ಗೌಡನ ಮದುವೆಯಾಗಲಿರುವ ಸುಂದರಿ ಸಿರಿ ಮಾಡೆಲ್ ಆಗಿದ್ದು , ಹಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ..
ಅಷ್ಟೇ ಅಲ್ಲ ಮುಂದೆ ವಿಜಯ್ ರಾಘವೇಂದ್ರ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ..