Hombale Films : ಶೀಘ್ರದಲ್ಲೇ ಹಿಂದಿ ಸಿನಿಮಾ ಘೋಷಿಸಲಿದೆ ‘ಕಾಂತಾರ’ ನಿರ್ಮಾಣ ಸಂಸ್ಥೆ…!!!
ಈಗಾಗಲೇ ಭಾಷೆಯ ಗಡಿ ದಾಟಿ ಸಿನಿಮಾಗಳನ್ನ ನಿರ್ಮಿಸುತ್ತಿರುವ ಹೊಂಬಾಳೆ ( Hombale Films ) KGF ಮೂಲಕ ಇಡೀ ವಿಶ್ವಕ್ಕೆ ಕನ್ನಡ ಇಂಡಸ್ಟ್ರಿಯ ಪವರ್ ತೋರಿಸಿದೆ.. ಸಲಾರ್ ಮೂಲಕ ತೆಲುಗಿನ ಸಿನಿಮಾವನ್ನೂ ಮಾಡುತ್ತಿದೆ..
ಸದ್ಯ ಮಲಯಾಳಂನಲ್ಲಿ ಈಗಾಗಲೇ ಫಹಾದ್ , ಪೃಥ್ವಿ ಸುಕುಮಾರ್ ಜೊತೆಗೆ ಟೈಟಲ್ ಸಮೇತ ಸಿನಿಮಾ ಘೋಷಿಸಿದೆ.. ತಮಿಳಿನಲ್ಲೂ ಸಿನಿಮಾ ಮಾಡುತ್ತಿದೆ..
ಈ ನಡುವೆ ಹೊಂಬಾಳೆ ಸಂಸ್ಥೆ ಶೀಘ್ರದಲ್ಲೇ ಹಿಂದಿ ಸಿನಿಮಾ ಘೋಷಿಸಲಿದೆ ಎಂಬ ಸುದ್ದಿ ಹರಿದಾಡ್ತಿದೆ..
ಹಿಂದಿ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ ಎನ್ನಲಾಗ್ತಿದೆ..