BBK9 : ರಾಜಣ್ಣ , ರೂಪೇಶ್ ಗೆ ಕಾಲಿಗೆ ಬಿದ್ದು ಕ್ಷಮೆ ಕೇಳಿ ಎಂದಿದ್ಯಾಕೆ ಗುರೂಜಿ..??
ಆರ್ಯವರ್ಧನ್ ಗುರೂಜಿ ಒಟಿಟಿ ಸೀಸನ್ ನಲ್ಲು ಹೈಲೇಟ್ ಆಗಿ ಟಿವಿ ಸೀಸನ್ ನಲ್ಲೂ ಸಖತ್ ಗಮನ ಸೆಳೆಯುತ್ತಿದ್ದಾರೆ..
ಎಲ್ಲಾ ಟಾಸ್ಕ್ ಗಳಲ್ಲೂ ಅಗ್ರೆಸ್ಸಿವ್ ಆಗಿ ಆಡ್ತಾರೆ..
ಕೆಲವೊಮ್ಮೆ ಎಡವಟ್ಟು ಗಳನ್ನ ಮಾಡ್ತಾರೆ , ಇನ್ನೂ ಕೆಲವೊಮ್ಮೆ ಪಕ್ಕಾ ಗೇಮ್ ಪ್ಲಾನರ್ ನಂತೆ ಕಾಣ್ತಾರೆ.. ಎಲ್ಲರ ಜೊತೆಗೂ ಚನಾಗಿದ್ದು ಆಟವಾಡುವಂತೆ ತೋರುತ್ತಾರೆ..
ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಕಾಡಿನ ಟಾಸ್ಕ್ ನಡೆಯುತ್ತಿದೆ.. ಈ ಟಾಸ್ಕ್ ನಿಂದ ಮನೆ ಸದಸ್ಯರು ಸಾಕಷ್ಟು ಪಜೀತಿ ಪಡ್ತಿದ್ದಾರೆ..
ಅಂದ್ಹಾಗೆ ಆರ್ಯವರ್ಧನ್ ಗುರೂಜಿ ತಮ್ಮ ಪತ್ನಿ , ಮಗಳನ್ನ ಬಹಳ ಇಷ್ಟ ಪಡ್ತಾರೆ..
ಇದನ್ನೇ ಇಟ್ಕೊಂಡು ರೂಪೇಶ್ ಶೆಟ್ಟಿ , ರಾಜಣ್ಣ ಗುರೂಜಿ ಕಾಲೆಳೆದಿದ್ದಾರೆ..
ಗುರೂಜಿ ಪತ್ನಿಯ ಹೆಸರು ಹೇಳಿ ತಮಾಷೆ ಮಾಡುತ್ತಾ ಆರ್ಯವರ್ಧನ್ ರನ್ನ ಸತಾಯಿಸಿದ್ದಾರೆ..
ಹೆಂಡ್ತಿ ಹತ್ತಿರ ಹೇಗೆ ಮಾತಡಬೇಕು ಅಂತಾ ಗುರೂಜಿಗೆ ರಾಜಣ್ಣ ಮತ್ತು ರೂಪೇಶ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದು , ಆರ್ಯವರ್ಧನ್ ಗುರೂಜಿ ಸಿಟ್ಟಾಗಿದ್ದಾರೆ..
ಬಾಡಿಯಲ್ಲಿರುವ ಎನರ್ಜಿಯೆಲ್ಲಾ ಆಚೆ ಬಂತು ನಿಮ್ಮ ಮಾತು ಕೇಳಿ ಕೇಳಿ ಎಂದು ಗುರೂಜಿ ಗದರಿಸಿದ್ದಾರೆ. ನೀವಿಬ್ಬರೂ ಸೇರಿ ನನ್ನ ಏನಂತಾ ತಿಳಿದಿದ್ದೀರಾ..??
ನೀವಿಬ್ಬರೂ ನನ್ನ ಕಾಲು ಹಿಡಿದು ಕ್ಷಮೆ ಕೇಳಬೇಕು ಎಂದು ಗುರೂಜಿ, ರಾಜಣ್ಣ, ರೂಪೇಶ್ ಇಬ್ಬರನ್ನೂ ಅಟ್ಟಾಡಿಸಿದ್ದಾರೆ..
ಈ ಪ್ರಸಂಗ ನೋಡಿ ಮನೆ ಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ..
ಇವರನ್ನ ಹಿಡಿಯೋದೋ ಅಥವಾ ನನ್ನ ಫ್ಯಾಂಟ್‌ನ ಹಿಡಿದುಕೊಳ್ಳಲೋ ಅಂದ ಗುರೂಜಿ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ..