Films Release : ಶುಭ ಶುಕ್ರವಾರ ನೆವೆಂಬರ್ 25 ರಂದು ರಿಲೀಸ್ ಆದ ಸಿನಿಮಾಗಳ ಪಟ್ಟಿ..!!
ನವೆಂಬರ್ 25..
ಶುಭ ಶುಕ್ರವಾರ..
ಸಿನಿಮಾಗಳ ರಿಲೀಸ್ ವಾರ..
ಇಂದು ಎಲ್ಲ ಭಾಷೆಗಳಲ್ಲೂ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿವೆ..
ಅದ್ರಲ್ಲೂ ಕನ್ನಡದಲ್ಲಿ ಬಹುನಿರೀಕ್ಷೆಯ 2 ಸಿನಿಮಾಗಳು ರಿಲೀಸ್ ಆಗಿವೆ..
ಒಟ್ಟಾರೆ ಕನ್ನಡದಲ್ಲಿ 3 ಸಿನಿಮಾಗಳು ರಿಲೀಸ್ ಆಗಿವೆ..
ಗಾಳಿಪಟ 2 ಹಿಟ್ ಆದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ರಿಲೀಸ್ ಆಗಿದೆ.. ಈ ಸಿನಿಮಾದಲ್ಲಿ ಕಿರುತೆರೆಯ ನಟಿ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ನಾಯಕಿಯಾಗಿದ್ದಾರೆ..
ಅಂದ್ಹಾಗೆ ನವೆಂಬರ್ 24 ರಂದು ಒಟಿಟಿಯಲ್ಲಿ ಕಾಂತಾರ ಸಿನಿಮಾ ಕೂಡ ರಿಲೀಸ್ ಆಗಿದೆ.. ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾ ಅಬ್ಬರಿಸುತ್ತಿದೆ..
ಇತ್ತ ಪವನ್ ಒಡೆಯರ್ ನಿರ್ದೇಶನದ ಸಿನಿಮಾ ರೆಮೋ ಕೂಡ ರಿಲೀಸ್ ಆಗಿದೆ.. ಇಶಾನ್ ಮತ್ತು ಆಶಿಕಾ ರಂಗನಾಥ್ ಜೋಡಿಯಾಗಿರುವ ಸಿನಿಮಾ ಟ್ರೇಲರ್ ಮೂಲಕ ಸಖತ್ ಸೌಂಡ್ ಮಾಡಿತ್ತು..
ಪ್ರೇಮ್ ನಟನೆಯ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ಕೂಡ ಬಿಡುಗಡೆಯಾಗಿದೆ..
ಯಾವ ಸಿನಿಮಾ ಕಡೆಗೆ ಹೆಚ್ಚು ಪ್ರೇಕ್ಷಕರ ಒಲವಿದೆ ಕಾದು ನೋಡ್ಬೇಕಿದೆ..