Kantara : ಕೊನೆಗೂ ಸಿಕ್ಕಿತು ಜಯ..!! ‘ವರಾಹ ರೂಪಂ’ ಹಾಡಿನ ಮೇಲೆ ತಡೆಯಾಜ್ಞೆ ರದ್ದು..!!
ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ.. ರಿಲೀಸ್ ಆಗಿ 55 ದಿನಗಳೇ ಕಳೆದ್ರೂ ಥಿಯೇಟರ್ ನಲ್ಲಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ..
ಅಷ್ಟೇ ಅಲ್ಲ ಸಿನಿಮಾ ಒಟಿಟಿಯಲ್ಲಿ ನವೆಂಬರ್ 24 ಕ್ಕೆ ರಿಲೀಸ್ ಆಗಿದೆ.,. ಆದ್ರೂ ಸಹ ಈಗಲೂ ಥಿಯೇಟರ್ ಗಳಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಿದೆ..
ಆದ್ರೆ ಕಾಂತಾರದ ವರಾಹ ರೂಪಂ ಹಾಡು ಮಲಯಾಳಂನ ಆಲ್ಬಂ ಸಾಂಗ್ ಥೈಕುಡಂ ಬ್ರಿಡ್ಜ್ ನ ನವರಸಂ ಟ್ಯೂನ್ ನಿಂದ ಕದ್ದದ್ದು ಎಮದು ಆರೋಪಿ ಕೋರ್ಟ್ ಅಂಗಳಕ್ಕೆ ಪ್ರಕರಣ ತಲುಪಿತ್ತು..
ಕೇರಳ ನ್ಯಾಯಾಲಯವು ಹಾಡಿನ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದ ನಂತರ ಹಾಡನ್ನ ಯೂಟ್ಯೂಬ್ ನಿಂದಲೂ ಡಿಲೀಟ್ ಮಾಡಲಾಗಿತ್ತು..
ಕೇರಳ ಹೈಕೋರ್ಟ್ ನಲ್ಲೂ ಹೊಂಬಾಳೆ ಫಿಲಮ್ಸ್ ಗೆ ಸೋಲಾಗಿತ್ತು..
ಒಟಿಟಿಗೆ ಬಂದ ಸಿನಿಮಾದಲ್ಲಿ ವರಾಹ ರೂಂ ಟ್ಯೂನ್ ಬದಲಾಯಿಸಲಾಗಿದೆ.. ಆದ್ರೆ ಒರಿಜಿನಲ್ ಟ್ಯೂನ್ ನೇ ಜನರು ಇಷ್ಟಡಪ್ತಿದ್ದು , ಅದೇ ಟ್ಯೂಬ್ ಗಾಗಿ ಡಿಮ್ಯಾಂಡ್ ಮಾಡ್ತಿದ್ದರು..
ಆದ್ರೀಗ ಕೊನೆಗೂ ಕಾಂತಾರ ಸಿನಿಮಾತಂಡಕ್ಕೆ ಜಯ ಸಿಕ್ಕಿದೆ..
ಹೌದು..!
ಈ ಹಿಂದಿನಂತೆಯೇ ವರಾಹರೂಪಂ ಹಾಡು ಬಳಕೆಗೆ ಅನುಮತಿ ಸಿಕ್ಕಿದೆ.
ಕೃತಿಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ವರಾಹರೂಪಂ ಹಾಡಿನ ಬರಹಗಾರ ಶಶಿಧರ್ ಕಾವೂರು ಅವರು ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ ಬಳಿಕ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದೆ..
ಅಲ್ಲದೇ ವರಾಹರೂಪಂ ಹಾಡಿಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವು ಮಾಡಿದೆ. ನ್ಯಾಯ ಗೆದ್ದಿತು. ಜೈ ತುಳುನಾಡು ಎಂದು ಬರೆದುಕೊಂಡಿದ್ದಾರೆ.
ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಕಾಂತಾರ ಸಿನಿಮದ ವರಾಹರೂಪಂ ಕೃತಿಚೌರ್ಯದ ಆರೋಪ ಮಾಡಿ ಕೇಸ್ ದಾಖಲಿಸಿತ್ತು.
ಅರ್ಜಿಯನ್ನು ಮಾನ್ಯ ಮಾಡಿದ್ದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಝಿಕ್ಕೋಡ್ ಪ್ರಧಾನ ಜಿಲ್ಲಾ ನ್ಯಾಯಾಲಯ ಕಾಂತಾರ ನಿರ್ಮಾಪಕರಿಗೆ ವರಾಹರೂಪಂ ಹಾಡನ್ನು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
ಮುಂದಿನ ಆದೇಶದವರೆಗೆ ಸಿಂಕ್ರೊನೈಸ್ ಮಾಡಿದ ವರಾಹರೂಪಂ ಗೀತೆಯೊಂದಿಗೆ ಕಾಂತಾರ ಚಿತ್ರದ ಪ್ರದರ್ಶನ, ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆ, ಸ್ಟ್ರೀಮಿಂಗ್ ಮಾಡದಂತೆ ಜಿಲ್ಲಾ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು.
ಕಾಂತಾರ ಚಿತ್ರದ ವರಾಹರೂಪಂ ಹಾಡಿನ ಬಳಕೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಬೇಕೆಂದು ಕೋರಿ ಹೊಂಬಾಳೆ ಫಿಲ್ಮ್ಸ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿತ್ತು.