Richa Chaddha : ಸೇನೆಗೆ ಅವಮಾನ – ಕ್ಷಮೆಯಾಚಿಸಿದ ಬಾಲಿವುಡ್ ನಟಿ..!!
ದೇಶದ ಸೈನಿಕರಿಗೆ ಅವಮಾನಿಸಿದ ಆರೋಪದಡಿ ಬಾಲಿವುಡ್ ನಟಿ ರಿಚಾ ಚಡ್ಡಾ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಭಾರತೀಯ ಸೇನೆ ಸನ್ನದ್ದವಾಗಿದೆ ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಟ್ಯಾಗ್ ಮಾಡಿದ್ದ ನಟಿ ಗಾಲ್ವಾನ್ ಹಾಯ್ ಹೇಳುತ್ತಿದೆ ಎಂದು ಬರೆದುಕೊಂಡಿದ್ದರು.
ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ರಿಚಾ ಚಡ್ಡಾ ಕ್ಷಮೆಯಾಚಿಸಿದ್ದಾರೆ..
ನನ್ನ ಉದ್ದೇಶ ಸೇನೆಯ ಅಪಮಾನ ಖಂಡಿತ ಅಲ್ಲ.. ಆದರೂ ಗೊತ್ತಿಲ್ಲದೇ ತಪ್ಪಾಗಿದ್ದರೆ ಕ್ಷಮೆಯಾಚಿಸುವೆ ಎಂದು ಬರೆದುಕೊಂಡಿದ್ದಾರೆ.. ನೆಟ್ಟಿಗರು ಕಮೆಂಟ್ ಗಳ ಸುರಿಮಳೆಗೈಯುತ್ತಿರುವ ಬೆನ್ನಲ್ಲೇ
ಟ್ವಿಟ್ಟರ್ ನಲ್ಲಿ ರಿಪ್ಲೆಗಳನ್ನು ಮ್ಯೂಟ್ ಮಾಡಿದ್ದಾರೆ.