Samantha : ಮತ್ತೆ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸ್ಯಾಮ್ ಆಕ್ರೋಶ
ಸಮಂತಾ ನಾಗಚೈತನ್ಯ ಜೊತೆಗೆ ಡಿವೋರ್ಸ್ ನಂತರ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.. ಅವರ ಯಶೋಧಾ ಸಿನಿಮಾ ಸೌಂಡ್ ಮಾಡ್ತಿದೆ.. ಮುಂದೆ ಖುಷಿ ಸಿನಿಮಾ ರಿಲೀಸ್ ಆಗಲಿದೆ..
ಈ ನಡುವೆ ಸಮಂತಾ ಅಪರೂಪದ ಕಾಯಿಲೆಯಿಂದಲೂ ಬಳಲುತ್ತಿದ್ದಾರೆ.. ಚಿಕಿತ್ಸೆ ಹಂತದಲ್ಲಿದ್ದಾರೆ.. ಆದ್ರೆ ಅವರ ಕಾಯಿಲೆ ಬಗ್ಗೆ , ಸಮಂತಾ ಆರೋಗ್ಯದ ಬಗ್ಗೆ ಇಲ್ಲ ಸಲ್ಲದ ವದಂತಿಗಳು ಹರಿದಾಡ್ತಲೇ ಇದ್ದು , ನಟಿ ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರೆ..
ಈ ಹಿಂದೆ ಸಂದರ್ಶನವೊಂದ್ರಲ್ಲಿ ಈ ಬಗ್ಗೆ ಮಾತನಾಡ್ತಾ ನಾನಿನ್ನೂ ಸತ್ತಿಲ್ಲ , ಬದುಕಿದ್ದೇನೆ, ಹೋರಾಡುತ್ತೇನೆ ಎಂದಿದ್ದರು..
ಇದೀಗ ಮತ್ತೆ ಗಾಸಿಪ್ ಹರಿದಾಡ್ತಿದ್ದು ಸಿಟ್ಟಾಗಿದ್ದಾರೆ..
ಸಮಂತಾ ಮೈಯೋಸಿಟಿಸ್ ನಿಂದ ಬಳಲುತ್ತಿದ್ದಾರೆ.. ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ.. ನಡುವೆ ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುಳ್ಳು ವದಂತಿ ಸೃಷ್ಟಿಸಿ ಹರಿಬಿಟ್ಟಿದ್ದಾರೆ.. ಇದ್ರಿಂದಾಗಿ ಅಭಿಮಾನಿಗಳೂ ಆತಂಕಗೊಂಡಿದ್ದರು..
ಕೆಲವು ಯೂಟ್ಯೂಬ್ ಚಾನೆಲ್ ಗಳು ನಟಿಯ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನ ಬಿತ್ತರಿಸಿದ್ದರು. ಇದರಿಂದ ಸಮಂತಾ ವೃತ್ತಿ ಜೀವನಕ್ಕೆ ತೊಂದರೆ ಆಗುತ್ತಿದೆ ಎನ್ನಲಾಗಿದೆ. ಹಾಗಾಗಿ ಸಮಂತಾ ಅಂತಹ ಯೂಟ್ಯೂಬ್ ಚಾನೆಲ್ ಗಳಿಗೆ ಕಾನೂನಿನ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ ಎನ್ನಲಾಗಿದೆ..