Samantha : ಯಶೋಧಾ ಸಿನಿಮಾಗೆ ಕಾನೂನಿನ ಸಂಕಷ್ಟ – ತಡೆಯಾಜ್ಞೆ
ಸಮಂತಾ ನಟನೆಯ ಮಹಿಳಾ ಪ್ರಧಾನ , ಸೆರೋಗೆಸಿ ಹಗರಣದ ಕುರಿತಾದ ಸಿನಿಮಾ ಯಶೋಧಾ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಅಬ್ಬರಿಸುತ್ತಿದೆ.. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.. ಸಮಂತಾ ನಟನೆಯನ್ನ ಜನ ಕೊಂಡಾಡುತ್ತಿದ್ದಾರೆ.. ಈ ನಡುವೆ ಸಮಂತಾಗೆ ಒಂದು ಸಂಕಷ್ಟ ಎದುರಾಗಿದೆ..
ಹೌದು..!
ಚಿತ್ರವನ್ನು ಒಟಿಟಿಗೆ ರಿಲೀಸ್ ಮಾಡಬಾರದು ಎಂದು ಇವಾ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಕೋರ್ಟ್ ಮೆಟ್ಟಿಲು ಏರಿದೆ. ಇವಾ ಮಾತುಗಳನ್ನು ಆಲಿಸಿರುವ ಕೋರ್ಟ್ ಕೂಡ ಆಸ್ಪತ್ರೆಯ ಪರವಾಗಿಯೇ ಆದೇಶ ನೀಡಿದೆ. ಒಟಿಟಿಯಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಸಿನಿಮಾದಲ್ಲಿ ಸಮಂತಾ ಬಾಡಿಗೆ ತಾಯಿ ಪಾತ್ರ ಮಾಡಿದ್ದಾರೆ. ಸಿನಿಮಾದಲ್ಲಿ ಇವಾ ಆಸ್ಪತ್ರೆಯನ್ನು ತೋರಿಸಲಾಗಿದೆ. ಅದು ಆಸ್ಪತ್ರೆಯ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಆಸ್ಪತ್ರೆಯನ್ನು ತೋರಿಸಲಾಗಿದೆ ಎಂದು ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಆರೋಪ ಮಾಡಿದೆ..
ಇದ್ರಿಂದ ತಮ್ಮ ಆಸ್ಪತ್ರೆಯ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಮೊರೆ ಹೋಗಿದ್ದರು..