Kantara 2 ಬಗ್ಗೆ ದಿಗಂತ್ ಮಾತು..!!! ಪಾರ್ಟ್ 2 ಸುಳಿವು ಸಿಕ್ತಾ..??
ಬಾಕ್ಸ್ ಆಫೀಸ್ ನಲ್ಲಿ 57 ದಿನಗಳೇ ಕಳೆದ್ರೂ ಸಿನಿಮಾ ಒಟಿಟಿಗೆ ಬಂದ್ರೂ ಥಿಯೇಟರ್ ಗಳಲ್ಲಿ ಕಾಂತಾರ ಕ್ರೇಜ್ ಕಡಿಮೆಯಾಗಿಲ್ಲ.. ಸುಮಾರು 16 ಕೋಟಿ ಬಜೆಟ್ ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಇದು ಇಂಡಸ್ಟ್ರಿಯಲ್ ಹಿಟ್..
ಅಂದ್ಹಾಗೆ ಈ ಸಿನಿಮಾದ ಪಾರ್ಟ್ 2 ಬಗ್ಗೆ ಸಖತ್ ಚರ್ಚೆಯಾಗ್ತಿದೆ.. ಕಾಂತಾರ 2 ಬರಬೇಕೆಂಬ ಡಿಮ್ಯಾಂಡ್ ಇದ್ದು , ಪ್ರಮೋಸ್ ಶೆಟ್ಟಿ ಹಾಗೂ ರಿಷಬ್ ಕೆಲ ಬಾರಿ ಕಾಂತರ 2 ಬಗ್ಗೆ ಸುಳಿವನ್ನೂ ನೀಡಿದ್ದಾರೆ.. ಈಗ ದಿಗಂತ್ ಈ ಬಗ್ಗೆ ಸುಳಿವು ನೀಡಿದ್ದಾರೆ..
ರಿಷಬ್ ಶೆಟ್ಟಿ ಅವರು, ದಿಗಂತ್ ಕಾಂಬಿನೇಷನ್ ನಲ್ಲಿ ಬ್ಯಾಚ್ಯುಲರ್ ಪಾರ್ಟಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಈರು ಆ ಸಿನಿಮಾದಿಂದ ಹೊರ ಬಂದಿದ್ದಾರೆ. ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ಕಾರಣವನ್ನು ಸ್ವತಃ ದಿಗಂತ್ ಅವರೇ ಹೇಳಿಕೊಂಡಿದ್ದಾರೆ. ರಿಷಬ್ ಅವರು ಕಾಂತಾರ 2 ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಿರುವುದರಿಂದ ನಟಿಸಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಹೀಗಾಗಿ ಕಾಂತಾರ 2 ಬರಲಿದ್ಯಾ ಎಂಬ ಕುತೂಹಲ ಕೆರಳಿದೆ..