Sharukh Khan : ಸೌದಿ ಅರೇಬಿಯಾದಲ್ಲಿ ಶಾರುಖ್ ಗೆ ಗೌರವ…!!
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ರೆಡ್ ಸೀ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಾರುಖ್ ಖಾನ್ ಅಭಿನಯದ ಎವರ್ ಗ್ರೀನ್ ಚಿತ್ರ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಪ್ರದರ್ಶನಗೊಳ್ಳಲಿದೆ. ಇದಲ್ಲದೆ, ಆ ಸಮಾರಂಭದಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರನ್ನ ಸಹ ಗೌರವಿಸಲಾಗುತ್ತದೆ.
ಸೌದಿಯ ಜೆಡ್ಡಾ ನಗರದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ 10 ದಿನಗಳ ಕಾಲ ಚಲನಚಿತ್ರಗಳ ಪ್ರದರ್ಶನ ಮತ್ತು ಸಂಗೀತ ಕಾರ್ಯಕ್ರಮವನ್ನು ಉಚಿತವಾಗಿ ಆಯೋಜಿಸಲಾಗುತ್ತದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಕಲ್ಟ್ ಕ್ಲಾಸಿಕ್ ಚಿತ್ರ ಡಿಡಿಎಲ್ಜೆ ಈವೆಂಟ್ನಲ್ಲಿ ಒಪನ್ ಸ್ಕ್ರೀನಿಂಗ್ ಆಗುತ್ತಿರುವ ಮೊದಲ ಚಲನಚಿತ್ರವಾಗಿದೆ.
ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಇತ್ತೀಚೆಗೆ ಶಾರುಖ್ ಖಾನ್ ಅವರನ್ನು ಚಲನಚಿತ್ರೋದ್ಯಮಕ್ಕೆ ಸಲ್ಲಿಸಿದ ಸೇವೆಗಾಗಿ ಗೌರವಿಸುವುದಾಗಿ ಘೋಷಿಸಿದೆ. ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಶಾರುಖ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ಮಾತನಾಡಿ, “ಬಿಡುಗಡೆಯಾಗಿ 27 ವರ್ಷಗಳ ನಂತರವೂ ನಮ್ಮ ಚಿತ್ರ, ವಿಶ್ವ ಚಲನಚಿತ್ರ ಇತಿಹಾಸದಲ್ಲಿ ಅತ್ಯಂತ ಪ್ರೀತಿಪಾತ್ರ ಚಿತ್ರಗಳಲ್ಲಿ ಒಂದಾಗಿ ಮುಂದುವರಿಯುತ್ತಿರುವುದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.