Adithi Prabhudeva : ಅದಿತಿಗೆ ಸಿಎಂ ಬೊಮ್ಮಾಯಿ ಸಂಬಂಧಿ ಎಂಬ ವಿಚಾರ ರಿವೀಲ್..!!
ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.. ಯಶಸ್ ಜೊತೆಗೆ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..
ಅಂದ್ಹಾಗೆ ಅರಮನೆ ಮೈದಾನದಲ್ಲಿ ಶ್ಯಾನೆ ಟಾಪಾಗಿನೇ ಇವರಿಬ್ಬರ ಆರತಕ್ಷತೆಗೂ ನಡೆದಿದೆ.. ಗಣ್ಯರು ಸ್ಟಾರ್ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದೆ.. ಯಶ್ ರಾಧಿಕ ದಂಪತಿ ಕಿರುತೆರೆ , ಹಿರಿತೆರೆ ನಟರು , ಜೊತೆಗೆ ರಾಜಕಾರಣಿಗಳು ಅಷ್ಟೇ ಅಲ್ದೇ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಇವರ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿದ್ದರು..
ಈ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್, ಪತ್ನಿ ರಾಧಿಕಾ ಪಂಡಿತ್, ಮೇಘಾ ಶೆಟ್ಟಿ, ರಜನಾ ಇಂದರ್, ವಿನಯ ಪ್ರಸಾದ್, ಶರಣ್, ಚಿಕ್ಕಣ್ಣ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.
ಮದುವೆಯಲ್ಲಿ ಪಿಂಕ್ ಲೆಹೆಂಗಾ ರೀತಿಯ ಡ್ರೆಸ್ ನಲ್ಲಿ ಅದಿತಿ ಸಖತ್ ಕ್ಯೂಟ್ ಆಗಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.. ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಅಧಿತಿಗೆ ಶುಭ ಕೋರುತ್ತಿದ್ದಾರೆ..
ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಸೋಮಣ್ಣ, ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಕೋರಿದರು.
ಅಂದ್ಹಾಗೆ ಆರತಕ್ಷೆತೆಯಲ್ಲಿ ಭಾಗಿಯಾದ ನಂತರವೇ ಅದಿತಿ ಬೊಮ್ಮಾಯಿ ಅವರಿಗೆ ಸಂಬಂಧಿ ಎಂಬ ವಿಚಾರವೂ ಕೂಡ ರಿವೀಲ್ ಆಗಿದೆ..
“ ಅದಿತಿ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ನನಗೆ ಆತ್ಮೀಯವಾಗಿ ಕರೆದಿದ್ದರು. ಹೀಗಾಗಿ ಬಂದು ಅವರಿಗೆ ಶುಭಾಶಯಗಳನ್ನು ಹೇಳಿದ್ದೇನೆ. ನಮ್ಮ ತಾಯಿ ಕಡೆಯಿಂದಾನೂ ಸಂಬಂಧ ಆಗಬೇಕು. ಹೀಗಾಗಿ ಬಂದು ಹಾರೈಸಿದ್ದೇನೆ. ಅವರ ಬದುಕು ಒಳ್ಳೆಯದಾಗಲಿ ಅಂತ ನಿಮ್ಮ ಮೂಲಕನೂ ಹಾರೈಸುತ್ತೇನೆ” ಎಂದು ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.
Adithi Prabhudeva is relative to adithi