BBK9 : ದೊಡ್ಮನೆಯಿಂದ ಗೊಬ್ಬರಗಾಲ ಔಟ್..!! ಮೋಸವಾಯ್ತಾ..!?? ನೆಟ್ಟಿಗರ ಅಭಿಯಾನ ಸ್ಟಾರ್ಟ್..!!
ಬಿಗ್ ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ.. ಕಳೆದ ವಾರ ದೀಪಿಕಾ ದಾಸ್ ಮನೆಯಿಂದ ಎಲಿಮಿನೇಟ್ ಆದ್ರೂ ಅವರನ್ನ ವಾಪಸ್ ಕರೆತರಲಾಗಿದೆ.. ಆದ್ರೀಗ ಬಹಳ ಚನ್ನಾಗಿ ಆಟ ಆಡ್ತಿದ್ದ ವಿನೋದ್ ಗೊಬ್ಬರಗಾಲ ಔಟ್ ಆಗಿರೋದು ನೆಟ್ಟಿಗರ ಕಣ್ ಕೆಂಪಾಗಿಸಿದೆ..
ದೀಪಿಕಾ ದಾಸ್ ಗೆ ಮೂರು ಚಾನ್ಸ್ ನೀಡಲಾಗಿದೆ.. ಬಿಗ್ ಬಾಸ್ ಸೀಸನ್ 7 ರಲ್ಲೂ ಕಾಣಿಸಿಕೊಂಡಿದ್ದರು. ಈ ಬಾರಿ ಮತ್ತೆ ಮನೆ ಪ್ರವೇಶ ಮಾಡಿ ಎಲಿಮಿನೇಟ್ ಆದ್ರೂ ವಾಪಸ್ ಕರೆಸಿಕೊಳ್ಳಲಾಗಿದೆ.. ಅವರಿಗೆ ಹೋಲಿಕೆ ಮಾಡಿದ್ರೆ ವಿನೋದ್ ಅಧ್ಬುತವಾಗಿ ಆಟವಾಡ್ತಿದ್ದಾರೆ.. ಅನೇಕರಿಗೆ ಇಷ್ಟವಾಗಿದ್ರೂ ಕೂಡ ಅವರ ಎಲಿಮಿನೇಷನ್ ಆಗಿರೋದ್ರಿಂದ ನೆಟ್ಟಿಗರು ವಿನೋದ್ ಪರ ಅಭಿಯಾನವನ್ನೇ ಶುರು ಮಾಡಿಬಿಟ್ಟಿದ್ದಾರೆ..
ಕಿರುತೆರೆಯ ಮಜಾಭಾರತ ರಿಯಾಲಿಟಿ ಶೋನಿಂದ ಹೆಸರು ಮಾಡಿದ್ದ ವಿನೋದ್ ಗೊಬ್ಬರಗಾಲ ಹಾಸ್ಯ ಕಲಾವಿದನಾಗಿ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲೂ ಗಮನ ಸೆಳೆದಿದ್ದರು..
ಗೊಬ್ಬರಗಾಲ ಎಲಿಮಿನೇಷನ್‌ನಿಂದ ಮನೆಮಂದಿ, ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡ್ತಿದ್ದಾರೆ.
#Badavara Makkalu Belibeku Kannayya ಅಭಿಯಾನಕ್ಕೆ ಸಾಕಷ್ಟು ಮಂದಿ ಸಾಥ್ ನೀಡುತ್ತಾ ವಿನೋದ್ ಮತ್ತೆ ಬಿಗ್ ಬಾಸ್ ಗೆ ವಾಪಸ್ ಕರೆಸಿ ಎಂದು ಆಗ್ರಹಿಸುತ್ತಿದ್ದಾರೆ..