Pavithra Lokesh : ಸೈಬರ್ ಕ್ರೈಮ್ ಪೊಲೀಸರಿಗೆ ಪವಿತ್ರಾ , ನರೇಶ್ ದೂರು..!!
ಟಾಲಿವುಡ್ ನ ಹಿರಿಯ ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೈದ್ರಾಬಾದ್ ಸೈಬರ್ ಪೊಲೀಸರಿಗೆ ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ದೂರು ನೀಡಿದ್ದಾರೆ. ಹೈದ್ರಾಬಾದ್ ಸೈಬರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮಿಬ್ಬರ ಬಗ್ಗೆ ಕೆಟ್ಟದಾಗಿ ಸುದ್ದಿ ಪ್ರಸಾರವಾಗುತ್ತಿದೆ. ಪೋಟೋಗಳನ್ನು ತಿರುಚಿ ಆಕ್ಷೇಪಾರ್ಹ ಕಾಮೆಂಟ್ ಮಾಡುತ್ತಿದ್ದು, ಇದರಿಂದ ನಮಗೆ ಮಾನಸಿಕ ಕಿರುಕುಳವಾಗುತ್ತಿದೆ ಎಂದು ಪವಿತ್ರ ಲೋಕೇಶ್ ಆರೋಪಿಸಿದ್ದಾರೆ.
ತಮ್ಮ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ಮಾಡುತ್ತಿವೆ ಎಂದು ಕೆಲವು ಫೇಜ್ ಗಳು, ಯೂಟ್ಯೂಬ್ ಚಾನಲ್ ಗಳ ವಿರುದ್ಧ ಪವಿತ್ರ ಲೋಕೇಶ್ ದೂರನ್ನು ದಾಖಲಿಸಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪೊಲೀಸರು ನಟಿ ಪವಿತ್ರ ಲೋಕೇಶ್ ಅವರ ದೂರನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.