Prabhas : ಕೃತಿ ಸನನ್ ಜೊತೆಗೆ ಪ್ರಭಾಸ್ ಲವ್ ವಿಚಾರ ನಿಜಾನಾ..?? ವರುಣ್ ಧವನ್ ಹೇಳಿದ್ದೇನು..??
ಬಾಹುಬಲಿ ಖ್ಯಾತಿಯ ಭಾರತದ ಬಿಗ್ ಸ್ಟಾರ್ ಪ್ರಭಾಸ್ ಗೆ ಈಗ ಸುಮಾರು 42 ವರ್ಷ ಆದ್ರೂ ಇನ್ನೂವರೆಗೂ ಮದುವೆಯಾಗದೇ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಪ್ರಭಾಸ್ ಸದ್ಯ ಭಾರತದ ಮೋಸ್ಟ್ ಡಿಸೈರೆಬಲ್ ಬ್ಯೂಚ್ಯುಲರ್…
ಪ್ರಸ್ತುತ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಪ್ರಭಾಸ್ ಯಾವಾಗ ಮದುವೆಯಾಗ್ತಾರೆ ಎಂಬ ಚರ್ಚೆ ಆಗಾಗ ಆಗ್ತಿರುತ್ತದೆ.. ಅನುಷ್ಕಾ ಶೆಟ್ಟಿ ಜೊತೆಗೆ ಅವರ ಹೆಸರು ಅನೇಕ ಬಾರಿ ಕೇಳಿ ಬಂದಿದೆಯಾದ್ರೆ ಈ ಬಗ್ಗೆ ಪ್ರಭಾಸ್ , ಅನುಷ್ಕಾ ಸ್ಪಷ್ಟಪಡಿಸಿಲ್ಲ..
ಇತ್ತೀಚೆಗೆ ಬಾಲಿವುಡ್ ನಟಿ ಕೃತಿ ಸನೋನ್ ಜೊತೆಗೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿದೆ.. ಆದಿಪುರುಷ್ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ..
ಸದ್ಯ ಈ ಸಿನಿಮಾದ ಮೂಲಕ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.. ಅಲ್ಲದೇ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಗುಸು ಗುಸು ಹರಿದಾಡ್ತಿದೆ..
ಇದೀಗ ಭೇಡಿಯಾ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹೀರೋ ವರುಣ್ ಧವನ್ ಅವರಾಡಿದ ಮಾತು ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ.
ಈ ವೇಳೆ ಸಂದರ್ಶನದಲ್ಲಿ ವರುಣ್ ಧವನ್ ಗೆ ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಭೇಡಿಯಾ ಸಿನಿಮಾದ ನಾಯಕಿ ಕೃತಿ ಸನೋನ್ ಹೆಸರು ಬಿಟ್ಟು ಒಂದಷ್ಟು ನಾಯಕಿಯರ ಹೆಸರನ್ನ ಕೊಟ್ಟಿದ್ದಾರೆ..
ಯಾಕೆ ಎಂದು ಕೇಳಿದಾಗ ಅವರ ಹೆಸರು ಬೇರೆಯವರ ಹೃದಯದಲ್ಲಿದೆ ಎಂದಿರುವ ವರುಣ್ ಧವನ್ ಮಾತು ಸಾಕಷ್ಟು ವೈರಲ್ ಆಗ್ತಿದ್ದು , ಹಲವು ಅನುಮಾನಗಳು ಮೂಡುತ್ತಿದೆ.. ಅವರು ಪ್ರಭಾಸ್ ಎಂದೇ ಅಭಿಮಾನಿಗಳು ಹೇಳ್ತಿದ್ದಾರೆ..
Prabhas , krthi sanon , love gossip , varun dhawan statement