Prabhas : ‘ರಾಜಾ ಡಿಲಕ್ಸ್’ ನಲ್ಲಿ ಪ್ರಭಾಸ್ ಗೆ ಮೂವರು ನಾಯಕಿಯರು..!!
ಪ್ರಭಾಸ್ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ , ಆದಿಪುರುಷ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ,.. ಅವರ ಬಳಿ ಇನ್ನೂ ಸ್ಪಿರಿಟ್ , ರಾಜಾ ಡಿಲಕ್ಸ್ ಸೇರಿ ಕೆಲ ಪ್ರಾಜೆಕ್ಟ್ ಗಳಿದ್ದಾವೆ.. ಎಲ್ಲವೂ ಕೂಡ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳೇ ಆಗಿವೆ..
ಪ್ರಭಾಸ್ ನಟನೆಯ ಬಾಹುಬಲಿ ಹಿಸ್ಟಾರಿಕಲ್ ಬ್ಲಾಕ್ ಬಾಸ್ಟರ್ ಹಿಟ್ ಆಗಿದ್ದು ಅನೇಕ ದಾಖಲೆಗಳನ್ನ ಬರೆದಿದೆ.. ಆಧ್ರೆ ಅದಾದ ನಂತರ ಬಂದ ಪ್ರಭಾಸ್ ಅವರ ರೆಡೂ ಸಿನಿಮಾಗಳೂ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿವೆ..
ಸಾಹೋ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿದ್ರೂ , ಜನರ ಮನಗೆಲ್ಲುವಲ್ಲಿ ವಿಫಲವಾಯ್ತು.. ರಾಧೆ ಶ್ಯಾಮ್ ಸಿನಿಮಾ ಸೋತು ಬಾಕ್ಸ್ ಆಫೀಸ್ ಫ್ಲಾಪ್ ಎನಿಸಿಕೊಂಡಿದೆ..
ಇನ್ನೂ ಇತ್ತೀಚೆಗೆ ರಿಲೀಸ್ ಆದ ಆದಿಪುರುಷ್ ಟೀಸರ್ ಅಂತೂ ಟ್ರೋಲ್ ಆಗ್ತಿದೆ.. ಕೆಟ್ ವೆಫ್ ಎಕ್ಸ್ , ವಿಶ್ಯುವಾಲಿಟಿ ನೋಡಿ ಹಾಸ್ಯಾಸ್ಪದವಾಗಿದೆ ಎಂದು ಕೆಂಡ ಕಾರಿದ್ದಾರೆ ನೆಟ್ಟಿಗರು.. ಹೀಗಾಗಿ ಸಿನಿಮಾದ ರಿಲೀಸ್ ಪೋಸ್ಟ್ ಪೋನ್ ಆಗಿದೆ..
ಸದ್ಯಕ್ಕೆ ಸಲಾರ್ ಮೇಲೆ ಎಲ್ಲರಿಗೂ ಬೆಟ್ಟದಷ್ಟು ನಿರೀಕ್ಷೆ ಇದೆ.. ಪ್ರಶಾಂತ್ ನೀಲ್ ಅವರ ಡೈರೆಕ್ಷನ್ ಮೇಲೆ ನಂಬಿಕೆಯಿದೆ… ಇನ್ನೂ ಪ್ರಭಾಸ್ ಅವರ ರಾಜಾ ಡಿಲಕ್ಸ್ ಸಿನಿಮಾ ಕೂಡ ಸೌಂಡ್ ಮಾಡ್ತಿದೆ..
ತೆಲುಗು ನಿರ್ದೇಶಕ ಮಾರುತಿ ನಿರ್ದೇಶನದ ಈ ಚಿತ್ರ ಇದೀಗ ಮತ್ತೊಂದು ವಿಚಾರಕ್ಕೆ ಸೌಂಡ್ ಮಾಡ್ತಿದೆ… ಈ ಸಿನಿಮಾದಲ್ಲಿ ಮೂವರು ನಾಯಕಿಯರು ಎನ್ನಲಾಗ್ತಿದೆ..
ಮೂವರು ನಾಯಕಿಯರ ಪೈಕಿ ಇಬ್ಬರು ಈಗಾಗಲೇ ಗೊತ್ತಾಗಿದ್ದು , ಮೂರನೇ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ ಎನ್ನಲಾಗ್ತಿದೆ..
ಅಂದ್ಹಾಗೆ ನಿಧಿ ಅಗರ್ವಾಲ್ ಹಾಗೂ ಮಾಳವಿಕಾ ಮೋಹನ್ ಈ ಸಿನಿಮಾದ ಬ್ಬರು ನಾಯಕಿಯರು ಎನ್ನಲಾಗಿದ್ದು , ಮೂರನೇ ಅವರ್ಯಾರೆಂಬ ಕ್ಯೂರಿಯಾಸಿಟಿ ಮೂಡಿದೆ..
ಇನ್ನೂ ಮೂಲಗಳ ಪ್ರಕಾರ ಮೂರನೇ ನಾಯಕಿಯಾಗಿ ರಿದ್ಧಿ ಕುಮಾರ್ ಗೆ ಅವಕಾಶ ಸಿಕ್ಕಿದೆ ಎನ್ನಲಾಗ್ತಿದೆ..
ಅಂದ್ಹಾಗೆ ಈ ಹಿಂದೆಯೇ ರಿದ್ಧಿ ರಾಧೆ ಶ್ಯಾಮ್ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ನಟಿಸಿದ್ದರು. ರಾಜ್ ತರುಣ್ ಅವರ ಲವರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.
ಇನ್ನೂ ಈ ಹಿಂದೆ ಶ್ರೀ ಲೀಲಾ ಮೂರನೇ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೀಗ ರಿದ್ಧಿ ನಟಿಸೋದು ಖಚಿತ ಎನ್ನುತ್ತಿವೆ ಮೂಲಗಳು..
ಇನ್ನೂ ಪ್ರಭಾಸ್ ಅವರು ಹೊಸ ಹೊಸ ಪ್ರಯೋಗ ಮಾಡ್ತಾ ಫೇಲ್ ಆಗ್ತಿದ್ದಾರೆ ಎಂದೇ ಹೇಳಲಾಗ್ತಿದೆ.. ಅದಕ್ಕೆ ಉದಾಹರಣೆ ರಾಧೆ ಶ್ಯಾಮ್.. ಡಿಫರೆಂಟ್ ಪಾತ್ರ ನಿಭಾಯಸಿದ್ದರು ಪ್ರಭಾಸ್.. ಆದ್ರೆ ಆಕ್ಷನ್ ಸೀನ್ಸ್ ಇರದೇ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುವ ರಿಸ್ಕ್ ತೆಗೆದುಕೊಂಡು ಎಡವಿದ್ದರು.. ಇದೀಗ ಹಾರರ್ ಕಾಮಿಡಿ ಸಿನಿಮಾವಾಗಿರುವ ರಾಜಾ ಡೀಲಕ್ಸ್ ಕೂಡ ಅವರಿಗೆ ವಿಭಿನ್ನ ಜಾನರ್ ಆಗಿದ್ದು , ಯಾವ ರೀತಿ ನಿಭಾಯಿಸಲಿದ್ದಾರೆಂಬ ಕ್ಯೂರಿಯಾಸಿಟಿ ಎಲ್ಲರದ್ದು..