BBK9 : ಈ ಸಲ ಡಿಫರೆಂಟ್ ನಾಮಿನೇಷನ್..! ಯಾರೆಲ್ಲಾ ಅನ್ ಸೇಫ್..??
ಬಿಗ್ ಬಾಸ್ 9 ಸಾಕಷ್ಟು ರೋಚಕತೆಯೊಂದಿಗೆ ಮುಂದೆ ಸಾಗ್ತಿದೆ.. ಭಾನುವಾರ ವಿನೋದ್ ಗೊಬ್ಬರಗಾಲ ಅವರ ಶಾಕಿಂಗ್ ಎಲಿಮಿನೇಷನ್ ನಂತರ ಇದೀಗ ಈ ವಾರ ಯಾರೆಲ್ಲಾ ಎಲಿಮಿನೇಷನ್ ಗೆ ನಾಮಿನೇಟ್ ಆಗಬೇಕೆಂದು ನಿರ್ಧರಿಸುವ ಸಮಯವಾಗಿತ್ತು..
ಈ ಬಾರಿ ಡಿಫರೆಂಟ್ ಆಗಿ ನಾಮಿನೇಟ್ ಮಾಡಲಾಯ್ತು..
ಕಳೆದ ವಾರ ಯಾವುದೇ ನಾಮಿನೇಷನ್ ನಡೆದಿರಲಿಲ್ಲ.. ನಾಮಿನೇಷನ್ ಇಲ್ಲದೇ ಗೊಬ್ಬರಗಾಲ ಔಟ್ ಆಗಿದ್ದು , ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ..
ಈ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಪ್ರತಿ ಸಲ ನಾಮಿನೇಷನ್ ಮಾಡುವಾಗ ಯಾರನ್ನು ನಾಮಿನೇಷನ್ ಮಾಡುತ್ತಾರೋ ಅವರ ಹೆಸರು ಮತ್ತು ಕಾರಣವನ್ನು ತಿಳಿಸಬೇಕಿತ್ತು. ಆದರೆ ಈ ವಾರ ವಿಭಿನ್ನವಾಗಿ ನಾಮಿನೇಷನ್ ನಡೆದಿದೆ.
ಆದ್ರೆ ಕಹಾನಿಮೇ ಟ್ವಿಸ್ಟ್ ಎಂಬಂತೆ ಈ ಬಾರಿ ಯಾರನ್ನು ಸೇವ್ ಮಾಡಬೇಕು ಎಂಬ ನಾಮಿನೇಷನ್ ನಡೆದಿದೆ. ಅದರಲ್ಲಿ ಬಿಗ್ ಬಾಸ್ ಕರೆಯುವ ಸ್ಪರ್ಧಿಗಳು ಒಂದೊಂದೊಂದು ರೂಮಿಗೆ ಹೋಗಿ ಸೌಂಡ್ ಪ್ರೂಫ್ ಧರಿಸಿಕೊಂಡು ಕೂತುಕೊಳ್ಳಬೇಕು ಎಂದು ನಿಯಮಗಳನ್ನು ತಿಳಿಸಿದ್ದರು. ಅದರಂತೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ.
ಒಬ್ಬರೇ ಸ್ಪರ್ಧಿಯನ್ನ ಇಬ್ಬರು ಆಯ್ಕೆ ಮಾಡಿದ ಪಕ್ಷದಲ್ಲಿ ಅವರು ಸೇವ್ ಆಗುತ್ತಾರೆ.. ಜೋಡಿಯಾಗದೇ ಒಂಟಿಯಾದರೆ ಅವರು ನಾಮಿನೇಟ್ ಆಗ್ತಾರೆ ಎಂಬ ನಿಯಮವಿತ್ತು..
ಆರ್ಯವರ್ಧನ್ ಗುರೂಜಿ ಹಾಗೂ ಅನುಪಮಾ ತಮ್ಮ ತಮ್ಮದೇ ಫೋಟೋ ತೆಗೆದುಕೊಂಡಿದ್ದರು.. ಇಬ್ಬರದ್ದೂ ಭಿನ್ನ ಭಿನ್ನ ಅಭಿಪ್ರಾಯವಾದರಿಂದ ಿಬ್ಬರೂ ನಾಮಿನೇಟ್ ಆದರು..
ದಿವ್ಯಾ ಉರುಡುಗ ಅಮೂಲ್ಯರ ಫೋಟೋ ತೆಗೆದು ಅವರು ಚನಾಗಿ ಆಡ್ತಿದ್ದಾರೆ ಅವರನ್ನ ಸೇವ್ ಮಾಡ್ತೇನೆ ಎಂದಿದ್ದಾರೆ.. ಇತ್ತ ಅಮೂಲ್ಯ ದಿವ್ಯಾರನ್ನ ಬಚಾವ್ ಮಾಡುವ ಪ್ರಯತ್ನ ಮಾಡಿದ್ದಾರೆ..
ನಂತರ ಕಾವ್ಯಶ್ರೀ , ಅರುಣ್ ಸಾಗರ್ ತಮ್ಮದೇ ಫೋಟೋಗಳನ್ನ ತೆಗೆದುಕೊಂಡಿದ್ದಾರೆ.. ಇನ್ನೂ ಸ್ವಾರ್ಥ ಬಿಟ್ಟು ಆಡಿದ ದೀಪಿಕಾ ಸಂಬರ್ಗಿ ಫೋಟೋ ಹಿಡಿದಿದ್ದರು.. ಸಂಬರ್ಗಿ ಕೂಡ ತಮ್ಮದೇ ಫೋಟೋ ಹಿಡಿದುಕೊಂಡಿದ್ದರಿಂದ ಇಬ್ಬರದ್ದೂ ಒಂದೇ ಆಯ್ಕೆಯಾದ ಕಾರಣಕ್ಕೆ ಸಂಬರ್ಗಿ ಸೇಫ್ ಆದ್ರು..
ಇನ್ನೂ ರೂಪೇಶ್ ಶೆಟ್ಟಿ ಕೂಡ ನಿಸ್ವಾರ್ಥವಾಗಿ ಆಡಿದ್ರು.. ರಾಜಣ್ಣರ ಫೋಟೋ ತೆಗೆದುಕೊಂಡರು.. ರಾಜಣ್ಣ ಸಹ ತಮ್ಮದೇ ಫೋಟೋ ಹಿಡಿದು.. ಹೀಗಾಗಿ ಜೋಡಿಯಾದರಿಂದ ರಾಜಣ್ಣ ಸೇಫ್ ಆದ್ರು..
ಸದ್ಯ ಆರ್ಯವರ್ಧನ್ , ಅನುಪಮಾ, ದಿವ್ಯಾ, ಕಾವ್ಯಾ, ಅರುಣ್, ದೀಪಿಕಾ ಹಾಗೂ ರೂಪೇಶ್ ಶೆಟ್ಟಿ ನಾಮಿನೇಟ್ ಆಗಿದ್ದಾರೆ.. ಅಷ್ಟೇ ಅಲ್ಲ ನೇರವಾಗಿ ನಾಮಿನೇಟ್ ಮಾಡುವ ಅವಕಾಶವನ್ನ ಬಳಸಿಕೊಂಡ ಈ ವಾರದ ಕ್ಯಾಪ್ಟನ್ ರಾಕೇಶ್ ಸಂಬರ್ಗಿಯವರನ್ನ ನಾಮಿನೇಟ್ ಮಾಡಿದ್ರು..
ಹೀಗಾಗಿ ಸೇವ್ ಆಗಿಯೂ ಡೇಂಜರ್ ಝೋನ್ ಗೆ ಸಂಬರ್ಗಿ ಹೋಗಿದ್ದಾರೆ..
ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಕಾದು ನೋಡ್ಬೇಕಿದೆ..