Blurr trailer : ಬಾಲಿವುಡ್ ಗೆ ಭಯ ಶುರು , ಥಿಯೇಟರ್ ಬಿಟ್ಟು ನೇರ ಒಟಿಟಿಗೆ ಸಿನಿಮಾಗಳು..!!
ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಸೋಲುತ್ತಿರುವುದಕ್ಕೆ ಭಯಪಟ್ಟು ಕೆಲ ಸಿನಿಮಾಗಳನ್ನ ನೇರವಾಗಿಯೇ OTT ಯಲ್ಲಿ ರಿಲೀಸ್ ಮಾಡಲು ಸಿನಿಮಾ ಮೇಕರ್ ಗಳು ಪ್ಲಾನ್ ಮಾಡ್ತಿದ್ದಾರೆ..
ರಶ್ಮಿಕಾ ಮೊದಲ ಬಾಲಿವುಡ್ ಸಿನಿಮಾ ಗುಡ್ ಬೈ ಫ್ಲಾಪ್ ಆದನಂತರ ಅವರ ಮತ್ತೊಂದು ಬಾಲಿವುಡ್ ಸಿನಿಮಾ ಮಿಷನ್ ಮಜ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ಸಿನಿಮಾದ ತಯಾರಕರು ಮುಂಣದಾಗಿದ್ದರು..
ಇದೀಗ ತಾಪ್ಸಿ ಪನ್ನು ಅಭಿನಯದ ಬ್ಲರ್ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ..
ಬಾಲಿವುಡ್ ಮತ್ತು ತೆಲುಗು ನಟಿ ತಾಪ್ಸಿ ಪನ್ನು ನಟಿಸಿರು ಹೊಸ ಚಿತ್ರ ಬ್ಲರ್ ಚಿತ್ರಮಂಮದಿರಗಳ ಬದಲಿಗೆ ನೇರವಾಗಿ OTT ಯಲ್ಲಿ ಬಿಡುಗೆಯಾಗಲಿದೆ.
ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ತಾಪ್ಸಿ ಸ್ವತಃ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅಜಯ್ ಬೆಹ್ಲ ನಿರ್ದೇಶನ ಮಾಡಿರುವ ಈ ಚಿತ್ರ ಡಿಸೆಂಬರ್ ನಲ್ಲಿ ZEE5 ನಲ್ಲಿ ಸ್ಟ್ರೀಮ್ ಆಗಲಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಮೆಚ್ಚುಗೆ ಪಡೆದುಕೊಂಡಿದೆ.
ತಾಪ್ಸಿ ಗಾಯತ್ರಿ ಮತ್ತು ಗೌತಮಿ ಎಂಬ ಅವಳಿ ಸಹೋದರಿ ಪಾತ್ರದಲ್ಲಿ ನಟಿಸುತ್ತಿದ್ದು, ಮೃತಪಟ್ಟ ಗೌತಮಿ ಕಥೆಯ ಸುತ್ತ ಈ ಚಿತ್ರ ಸುತ್ತಲಿದೆ ಎಂದು ಟ್ರೈಲರ್ ಮೂಲಕ ತಿಳಿಸಲಾಗಿದೆ.
ತಾಪ್ಸಿ ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಬ್ಲರ್ ಚಿತ್ರವನ್ನ ತಾಪ್ಸೀ ಅವರ ಹೋಮ್ ಪ್ರೊಡಕ್ಷನ್ ಸಂಸ್ಥೆ ಔಟ್ ಸೈಡರ್ಸ್ ಫಿಲ್ಮ್ಸ್ ನಿರ್ಮಿಸಿದೆ. ಕಳೆದ ವರ್ಷ ಜುಲೈನಲ್ಲಿ ಚಿತ್ರ ಘೋಷಣೆಯಾಗಿತ್ತು. ನೈನಿತಾಲ್ ಸುತ್ತಾಮುತ್ತಾ ಚಿತ್ರೀಕರಿಸಲಾಗಿದೆ, ಬ್ಲರ್ ಎಂಬುದು ಸ್ಪ್ಯಾನಿಷ್ ಚಲನಚಿತ್ರ ಜೂಲಿಯಾಸ್ ಐಸ್ನ ರೀಮೇಕ್ ಚಿತ್ರವಾಗಿದೆ.
ಈ ವರ್ಷ OTT ಯಲ್ಲಿ ಬಿಡುಗಡೆಯಾಗುತ್ತಿರುವ ತಾಪ್ಸಿಯ ಆರನೇ ಚಿತ್ರ ಇದಾಗಿದೆ. 2022 ರಲ್ಲಿ ತಾಪ್ಸಿಯ ಲೂಪಾಲ್ಪೇಟಾ ಮೊದಲು OTT ಯಲ್ಲಿ ಬಿಡುಗಡೆಯಾಗಿತ್ತು.
Blurr trailer , direct ott, cinibazaar