Film Release Updates : ಡಿಸೆಂಬರ್ ನಲ್ಲಿ ಹೊಸ ಸಿನಿಮಾಗಳ ಜಾತ್ರೆ..!!
ನವೆಂಬರ್ ಇನ್ನೇನು ಮುಗಿತ್ತಿದ್ದು 2022 ರ ಕೊನೆಯ ತಿಂಗಳು ಡಿಸೆಂಬರ್ ಸಮೀಪಿಸುತ್ತಿದೆ.. ಅಂದ್ಹಾಗೆ ಡಿಸೆಂಬರ್ ಯಾವಾಗಲೂ ಸಿನಿಮಾಗಳಿಗೆ ವರದಾನವಾಗಿ ಸಾಬೀತಾಗಿದೆ..
ಡಿಸೆಂಬರ್ ನಲ್ಲಿ ಕನ್ನಡ , ಬಾಲಿವುಡ್ , ಕಾಲಿವುಡ್ , ಮಾಲಿವುಡ್ ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಲಿದೆ..
ಸಾಕಷ್ಟು ಸಿನಿಮಾಗಳ ನಡುವೆ ಫೈಟ್ ಕೂಡ ನಡೆಯಲಿದೆ.. ಅದ್ರಲ್ಲೂ ವಿಶ್ವಾದ್ಯಂತ ಜನ ಎದುರು ನೋಡ್ತಿರುವ ಅವತಾರ್ 2 ಸಿನಿಮಾ ಕೂಡ ರಿಲೀಸ್ ಆಗ್ತಿದ್ದು, ಈ ಸಿನಿಮಾ ಭಾರತೀಯ ಸಿನಿಮಾಗಳಿಗೆ ಬಾಕ್ಸ್ ಆಫೀಸ್ ನಲ್ಲಿ ಟಫ್ ಫೈಟ್ ಕೊಡಲಿದೆ..
ಸದ್ಯಕ್ಕೆ ಡಿಸೆಂಬರ್ ನಲ್ಲಿ ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗಲಿದೆ ಎಂದು ನೋಡುವುದಾದರೆ ,,,
ಕನ್ನಡದಲ್ಲಿ 4 ಸಿನಿಮಾಗಳ ನಡುವೆ ಕಾಂಪಿಟೇಷನ್ ಇರಲಿದೆ..
ತಿಮ್ಮಯ್ಯ ಮತ್ತು ತಿಮ್ಮಯ್ಯ, ಧರಣಿ ಮಂಡಲ ಮಧ್ಯದೊಳಗೆ, ದುಷ್ಟಕೂಟ, ಮತ್ತು ವಸಂತಿ ನಲಿದಾಗ ಸಿನಿಮಾಗಳು ರಿಲೀಸ್ ಆಗಲಿದೆ..
ಮಾಲಿವುಡ್ ಬಗ್ಗೆ ಮಾತನಾಡೋದಾದ್ರೆ
ಮೋಹನ್ ಲಾಲ್ ಅವರ ಅಲೋನ್ ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ಪ್ರಮುಖ ಚಲನಚಿತ್ರಗಳಲ್ಲಿ ಒಂದಾಗಿದೆ. ಇದು ಡಿಸೆಂಬರ್ 2 ರಂದು ಬಿಡುಗಡೆಯಾಗಲಿದೆ.
ಇದೇ ವೇಳೆ, ಪೃಥ್ವಿರಾಜ್ ಸುಕುಮಾರನ್ ಮತ್ತು ನಯನತಾರಾ ಅವರ ಗೋಲ್ಡ್ ಸಿನಿಮಾ ಡಿಸೆಂಬರ್ ನಲ್ಲಿ ಪ್ರೀಮಿಯರ್ ಆಗಲಿದೆ
ಬಾಲಿವುಡ್ ನಲ್ಲಿ ಅತಿ ಹೆಚ್ಚು ಹೊಸ ಚಲನಚಿತ್ರಗಳು ಬಿಡುಗಡೆಯಾಗಲಿದೆ..
ಡಿಸೆಂಬರ್ ನಲ್ಲಿ ಒಂದಷ್ಟು ಭರವಸೆಯ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಇಂಡಿಯಾ ಲಾಕ್ ಡೌನ್, ಫ್ರೆಡ್ಡಿ ಮತ್ತು ಆನ್ ಆಕ್ಷನ್ ಹೀರೋ ಡಿಸೆಂಬರ್ 2 ರಂದು ಬಿಡುಗಡೆಯಾಗಲಿದೆ.
ಸಲಾಮ್ ವೆಂಕಿ ಡಿಸೆಂಬರ್ 9 ರಂದು ಪ್ರಥಮ ಪ್ರದರ್ಶನಗೊಳ್ಳಲಿದೆ.
ಸರ್ಕಸ್ ಮತ್ತು ಮೆರ್ರಿ ಕ್ರಿಸ್ಮಸ್ ಡಿಸೆಂಬರ್ 23 ರಂದು ಘರ್ಷಣೆಯಾಗಲಿದೆ.
ತಮಿಳಿನಲ್ಲಿ
ವಾತಿ, ಪಾತು ತಾಳ , ಅಗಿಲನ್ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.
ಕೆಲವು ಪ್ರಮುಖ ಸಿನಿಮಾಗಳು ಮಾತ್ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿವೆ.
ಬಾರ್ಡರ್, ಡ್ರೈವರ್ ಜಮುನಾ ಮತ್ತು ವಾಕಿಂಗ್ ಟಾಕಿಂಗ್ ಸ್ಟ್ರಾಬೆರಿ ಐಸ್‌ಕ್ರೀಮ್ ಕೂಡ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ.
ತೆಲುಗಿನಲ್ಲಿ ‘ಖುಷಿ’ ಮತ್ತು ‘ಹಿಟ್ 2’ ಡಿಸೆಂಬರ್ ನಲ್ಲಿ ಬರಲಿದೆ..