Pavithra Lokesh : ನರೇಶ್ ಪತ್ನಿ ವಿರುದ್ಧ ಕೇಸ್ ದಾಖಲಿಸಿದ ಪವಿತ್ರಾ..!!
ಟಾಲಿವುಡ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಸಂಚಲವನ್ನೇ ಸೃಷ್ಟಿಸಿದ್ದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸಂಬಂಧ ಇದೀಗ ಒಂದ್ ಹೆಜ್ಜೆ ಮುಂದೆಯೇ ಹೋಗಿದೆ ಎನ್ನಬಹದು..
ನರೇಶ್ ತಂದೆ ತೀರಿಕೊಂಡಾಗಲೂ ಪವಿತ್ರಾ ಲೋಕೇಶ್ , ನರೇಶ್ ಒಟ್ಟಾಗಿ ಕಾಣಿಸಿಕೊಂಡಿದ್ದರು.. ೆಷ್ಟೇ ಟ್ರೋಲ್ ಗಳಾದ್ರೂ ಏನೇ ಆದ್ರೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ..
ಸಾಲದಕ್ಕೆ ಇವರಿಬ್ಬರ ಕಥೆಯ ಸಿನಿಮಾ ಕೂಡ ಬರಲಿದೆ ಎನ್ನಲಾಗ್ತಿದೆ.. ಈ ನಡುವೆ ಪವಿತ್ರಾ ಲೋಕೇಶ್ ನರೇಶ್ ಪತ್ನಿ ರಮ್ಯಾ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..
ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಮದುವೆಯಾದವರಿಂದ ದೂರಾಗಿ ಒಟ್ಟಿಗೆ ಇದ್ದಾರೆ.. ಈ ಸಂಬಂಧ ಈ ಹಿಂದೆ ನರೇಶ್ ಪತ್ನಿ ರಮ್ಯಾ ನ್ಯಾಯಕ್ಕಾಗಿ ಗಲಾಟೆ ಮಾಡಿದ್ದರು ,. ಸುದ್ದಿಗೋಷ್ಠಿಯನ್ನೂ ನಡೆಸಿದ್ದರು..
ಇದಕ್ಕೆ ಪ್ರತಿಯಾಗಿ ಪವಿತ್ರಾ ಕೂಡ ಸುದ್ದಿಗೋಷ್ಠಿ ನಡೆಸಿದ್ದರು..
ತಮ್ಮ ಮಾನಹಾನಿಗೆ ಕೆಲವು ಯೂಟ್ಯೂಬ್ ಚಾನೆಲ್ ಗಳು, ವೆಬ್ ಸೈಟ್ಗಳು, ಸಾಮಾಜಿಕ ಜಾಲತಾಣದ ಟ್ರೋಲ್ ಪೇಜ್ ಗಳು ಯತ್ನಿಸುತ್ತಿವೆ ಎಂದು ಪವಿತ್ರಾ ಲೋಕೇಶ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲ ಇದೇ ದೂರಿನಲ್ಲಿ ನರೇಶ್ ರ ಮೂರನೇ ಪತ್ನಿ ರಮ್ಯಾ ರಘುಪತಿ ಬಗ್ಗೆಯೂ ದೂರು ನೀಡಿದ್ದಾರೆ ಎನ್ನಲಾಗಿದೆ..
ಪವಿತ್ರಾ ಲೋಕೇಶ್ ನೀಡಿರುವ ದೂರಿನ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತೆಲಂಗಾಣ ಸೈಬರ್ ಪೊಲೀಸ್ ವಿಭಾಗದ ಎಸಿಪಿ ಪ್ರಸಾದ್ ಅವರು ‘ ತಮ್ಮ ಬಗ್ಗೆ ಅಶ್ಲೀಲವಾಗಿ, ಅಸಭ್ಯವಾಗಿ ಕೆಲವು ಯೂಟ್ಯೂಬ್ ಚಾನೆಲ್ ಗಳು ಸುದ್ದಿ ಪ್ರಸಾರ ಮಾಡಿವೆ.
ವೆಬ್ ಸೈಟ್ ನಲ್ಲಿಯೂ ನನ್ನ ತೇಜೋವಧೆ ಮಾಡುವ ರೀತಿ ಸುದ್ದಿಗಳನ್ನು ಬರೆಯಲಾಗಿದೆ. ಇವುಗಳ ಹಿಂದೆ ನರೇಶ್ ರ ಮೂರನೇ ಪತ್ನಿ ರಮ್ಯಾ ರಘುಪತಿ, ಶಿವಕುಮಾರಿ ಹಾಗೂ ರಾಮರಾವ್ ಅವರು ಇದ್ದಾರೆ ಎಂಬ ಶಂಕೆಯನ್ನು ಪವಿತ್ರಾ ಲೋಕೇಶ್ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ಇದೇ ಸಂಬಂಧ 15 ಯೂಟ್ಯೂಬ್ ಚಾನೆಲ್ ಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿದೆ..