Ramya : ಸ್ಯಾಂಡಲ್ ವುಡ್ ಕ್ವೀನ್ ಗೆ ಬರ್ತ್ ಡೇ ಸಂಭ್ರಮ..!!
ಸ್ಯಾಂಡಲ್ ವುಡ್ ನ ಟ್ವೀನ್ , ಮೋಹಕತಾರೆ ರಮ್ಯಾಗೆ ಹುಟ್ಟುಹಬ್ಬದ ಸಂಭ್ರಮ.. ಸಿನಿಮಾರಂಗದಲ್ಲಿ ಕ್ವೀನ್ ಆಗಿ ಮೆರೆದ ರಮ್ಯಾ ಸುಮಾರು 7-8 ವರ್ಷಗಳಿಂದ ಬಣ್ಣ ಹಚ್ಚಿಲ್ಲವಾದ್ರೂ ಅವರ ಕ್ರೇಜ್ ಮಾತ್ರ ಒಂದಿಷ್ಟೂ ಕಡಿಮೆಯಾಗಿಲ್ಲ..
ಇದೀಗ ನಿರ್ಮಾಣಕ್ಕೂ ಕೈ ಹಾಕಿರುವ ರಮ್ಯಾ ನಟನೆಗೂ ಕಮ್ ಬ್ಯಾಕ್ ಮಾಡ್ತಿದ್ದಾರೆ.. ಡಾಲಿ ಧನಂಜಯ್ ಉತ್ತರಕಾಂಡ ಸಿನಿಮಾ ಮೂಲಕ ಪವರ್ ಫುಲ್ ಕಮ್ ಬ್ಯಾಕ್ ಮಾಡ್ತಿದ್ದಾರೆ..
ಅವರ ಅಭಿಮಾನಿಗಳು ಮತ್ತೆ ರಮ್ಯಾರನ್ನ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.. ನಿರ್ಮಕಾಣದ ಮೊದಲ ಸಿನಿಮಾ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ..
ರಮ್ಯಾ 40 ನೇ ವಸಂತಕ್ಕೆ ಕಾಲಿಟ್ಟಿದ್ದು , ಅವರ ಅಭಿಮಾನಿಗಳು , ಆಪ್ತರು , ಸ್ಟಾರ್ ಗಳು ಮೋಹಕತಾರೆಗೆ ಬರ್ತ್ ಡೇ ಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
2003 ರಲ್ಲಿ ತೆರೆಕಂಡ ಅಭಿ ಸಿನಿಮಾ ಮೂಲಕ ರಮ್ಯಾ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು.. ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ರಮ್ಯಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದರು,..
ಈ ಸಿನಿಮಾ ಮೂಲಕ ರಮ್ಯಾ ಸಖತ್ ಶೈನ್ ಆಗಿದ್ದರು..
ಇನ್ನೂ ರಾಜಕೀಯದಲ್ಲೂ ರಮ್ಯಾ ಒಂದು ಟೈಮ್ ನಲ್ಲಿ ಬ್ಯುಸಿಯಿದ್ದರೂ.. ನಂತರ ರಾಜಕೀಯ ಸಿನಿಮಾರಂಗದಿಂದಲೂ ಬ್ರೇಕ್ ಪಡೆದುಕೊಂಡಿದ್ದರು..
ನಟಿ ರಮ್ಯಾ 1982ರ ನವೆಂಬರ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ದಿವ್ಯಾ ಸ್ಪಂದನ ರಮ್ಯಾ ಹುಟ್ಟು ಹೆಸರು. ರಮ್ಯಾ ಪೋಷಕರು ಮೂಲತಃ ಮಂಡ್ಯದವರು. ತಾಯಿ ರಂಜಿತಾ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯೆ ಹಾಗೂ ತಂದೆ ಆರ್ ಟಿ ನಾರಾಯನ್ ಓರ್ವ ಉದ್ಯಮಿಯಾಗಿದ್ದರು.
ಅಮೃತಧಾರೆ , ಅರಸು , ಆಕಾಶ್ , ಎಕ್ಸ್ ಕ್ಯೂಸ್ ಮಿ ಅಂತಹ ಹಿಟ್ ಸಿನಿಮಾಗಳಲ್ಲಿ ರಮ್ಯಾ ನಟಿಸಿದ್ದಾರೆ..
2016 ರಲ್ಲಿ ನಾಗರಹಾವು ಸಿನಿಮಾ ಮೂಲಕ ಸಿನಿಮಾರಂಗದಿಂದ ರಮ್ಯಾ ಅಂತರ ಕಾಯ್ದುಕೊಂಡರು..