Sandalwood : ಮದುವೆ ಗಾಸಿಪ್ ಬೆನ್ನಲ್ಲೇ ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಶಿಷ್ಠ – ಹರಿಪ್ರಿಯಾ..!!
ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಹಾಟ್ ಟಾಪಿಕ್ ಅಂದ್ರೆ ವಶಿಷ್ಠ ಸಿಂಹ ಹಾಗೂ ಹರಿಪ್ರಿಯ ನಡುವೆ ಮದುವೆಯ ಗಾಸಿಪ್.. ಹರಿಪ್ರಿಯ ಮೂಗು ಚುಚ್ಚಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರು ಮದುವೆಯಾಗಲಿದ್ದಾರೆಂಬ ಗುಸುಗುಸು ಶುರುವಾಗಿತ್ತು,..
ಮೂಗು ಚುಚ್ಚಿಸಿದ್ದ ಸಂದರ್ಭದಲ್ಲಿ ವಸಿಷ್ಠ ಸಿಂಹ ಅವರೇ ಉಪಸ್ಥಿತರಿದ್ದು, ಮೂಗು ಚುಚ್ಚಿಸಿದ್ದರು. ಆನಂತರ ಅನೇಕ ವಿಡಿಯೋಗಳಲ್ಲಿ ಇಬ್ಬರೂ ಒಟ್ಟಾಗಿ ಡಾನ್ಸ್ ಮಾಡಿದ್ದರು. ವಿಡಿಯೋಗಳಿಗೆ ಪಾರ್ಟನರ್ ಎಂದೂ ಕೂಡ ಬರೆದುಕೊಂಡಿದ್ದರು.
ಹೀಗಾಗಿ ಈ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ..
ಇದೆಲ್ಲದರ ನಡುವೆ ಇಬ್ಬರೂ ಈಗಾಗಲೇ ದುಬೈ ಪ್ರವಾಸ ಮಾಡಿ ಶಾಪಿಂಗ್ ಕೂಡ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಇದೀಗ ಈ ಸಂಬಂಧಿತ ಫೋಟೋ ಕೂಡ ಸಾಕ್ಷಿ ರೂಪದಲ್ಲಿ ಸಿಕ್ಕಿದ್ದು ವೈರಲ್ ಆಗ್ತಿದೆ.
ಈ ಮೂಲಕ ಈ ಇಬ್ಬರೂ ಮದುವೆಯಾಗ್ತಿರುವ ಗಾಸಿಪ್ ಗೆ ಮತ್ತಷ್ಟು ಬಲ ಬಂದಿದೆ..