BBK9 : ಮನೆಯಲ್ಲಿ ಹಾಲಿಗಾಗಿ ದೊಡ್ಡ ಕಿತ್ತಾಟ..!!
ಬಿಗ್ ಬಾಸ್ ಕನ್ನಡ 9 ಸಾಕಷ್ಟು ರೋಚಕತೆಯಿಂದ ಮುಂದೆ ಸಾಗ್ತಿದೆ..
ಈಗ ಮನೆಗೆ ಸದಸ್ಯರ ಮನೆಯವರ ಎಂಟ್ರಿಯೂ ಆರಂಭವಾಗಿದೆ..
ದಿವ್ಯಾ ಉರುಡುಗ , ರಾಕೇಶ್ ಅಮ್ಮಂದಿರು ಮನೆಗೆ ಬಂದ ನಂತರ ಇಬ್ಬರೂ ಬಹಳ ಭಾವುಕರಾಗಿದ್ದರು..
ಇದೀಗ ಟಾಸ್ಕ್ ನಲ್ಲಿ ಗಲಾಟೆಯೂ ನಡೆಯುತ್ತಿದೆ..
ಬಿಗ್ ಬಾಸ್ ಮನೆಯಲ್ಲಿ ಊಟ-ತಿಂಡಿಗೆ ಬೇಕಾದ ಆಹಾರ ಪದಾರ್ಥಗಳನ್ನು ಬಿಗ್ ಬಾಸ್ ಆಗಾಗ ಕಳುಹಿಸಿಕೊಡುತ್ತಾರೆ. ಅದರ ಜೊತೆಗೆ ಒಬ್ಬೊಬ್ಬರಿಗೆ ಇಂತಿಷ್ಟು ಹಾಲು ಅಂತಾನೂ ನೀಡುತ್ತಾರೆ.
ಅದರಲ್ಲಿ ಎಲ್ಲರ ಒಪ್ಪಿಗೆ ಪಡೆದು ಎಲ್ಲರ ಹಾಲನ್ನು ಬಳಸಿಕೊಂಡು, ಸ್ವೀಟ್ ಆದ್ರೂ ಮಾಡಬಹುದು, ಮೊಸರಾದ್ರೂ ಮಾಡಬಹುದು, ಟೀ ಕಾಫಿಯಾದರೂ ಕುಡಿಯಬಹುದು. ಆದ್ರೆ ಈಗ ಮನೆಯಲ್ಲಿ ಹಾಲಿಗೆ ನೀರಾಕುವ ವಿಚಾರಕ್ಕೆ ಜಗಳಗಳು ನಡೆಯುತ್ತಿವೆ.
ರಾಕೇಶ್ ಎಲ್ಲರೂ ಕೂತಿದ್ದಾಗ ಹಾಲಿನ ಬಗ್ಗೆ ಚರ್ಚೆ ಮಾಡಿದ್ದಾರೆ. ಈಗ ಮತ್ತೆ ಹಾಲು ಒಬ್ಬೊಬ್ಬರಿಗೆ ಬೇಕಾಗುತ್ತೆ ಏನು ಮಾಡುವುದು ಎಂದಾಗ ಅಲ್ಲಿಯೇ ಇದ್ದ ಪ್ರಶಾಂತ್ ಸಂಬರ್ಗಿ, ಅದರ ಬಗ್ಗೆ ಬುಕ್ ಇದೆ. ಬೇರೆಯವರನ್ನು ಎಷ್ಟು ಸಮಾನತೆಯಿಂದ ನೋಡಿಕೊಳ್ಳುತ್ತಾರೆ. ನಾನೆಷ್ಟು ಸಮಾನವಾಗಿರಬೇಕು ಎಂಬ ಮನಸ್ಥಿತಿ ಎದ್ದು ಕಾಣುತ್ತೆ ಎಂದಿದ್ದಾರೆ. ಹಾಲಿಗೆ ನೀರು ಹಾಕುವುದು ಬೇಡ ಎಂದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ.