Jai Bhim : ಸಂಚಲನ ಸೃಷ್ಟಿಸಿದ್ದ ಜೈ ಭೀಮ್ ಸಿನಿಮಾದ ಪಾರ್ಟ್ 2 ಬರುತ್ತಾ..??
ದೇಶಾದ್ಯಂತ ಅದ್ರಲ್ಲೂ ವಿಶೇಷವಾಗಿ ಯುವಕರಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ತಮಿಳಿನ ಸ್ಟಾರ್ ನಟ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾ ವಿವಾದಗಳಿಂದಲೂ ಸುದ್ದಿಯಾಗಿತ್ತು.. ಸಾಕಷ್ಟು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿತ್ತು..
ಅಂದ್ಹಾಗೆ ಇದೀಗ ಈ ಸಿನಿಮಾದ ಪಾರ್ಟ್ 2 ಬರಲಿದ್ಯಂತೆ.. ಹೀಗೊಂದು ಸುದ್ದಿ ಸಖತ್ ಸದ್ದು ಮಾಡ್ತಿದೆ..
ಖಡಕ್ ವಕೀಲರ ಪಾತ್ರದಲ್ಲಿ ಸೂರ್ಯ ಮಿಂಚಿದ್ದರು.. ಇದೀಗ ಈ ಸಿನಿಮಾದ ಪಾರ್ಟ್ 2 ಅನ್ನು ತೆರೆಗೆ ತರಲು ತೆರೆಮರೆಯಲ್ಲಿ ಸದ್ದಿಲ್ಲದೇ ತಯಾರಿ ನಡೆಯುತ್ತಿದೆ ಎನ್ನಲಾಗ್ತಿದೆ..