Prabhas ಜೊತೆಗೆ ಲವ್ ಗಾಸಿಪ್ ಗೆ ಕೃತಿ ರಿಯಾಕ್ಷನ್..!!
ಬಾಹುಬಲಿ ಖ್ಯಾತಿಯ ಭಾರತದ ಬಿಗ್ ಸ್ಟಾರ್ ಪ್ರಭಾಸ್ ಗೆ ಈಗ ಸುಮಾರು 42 ವರ್ಷ ಆದ್ರೂ ಇನ್ನೂವರೆಗೂ ಮದುವೆಯಾಗದೇ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಪ್ರಭಾಸ್ ಸದ್ಯ ಭಾರತದ ಮೋಸ್ಟ್ ಡಿಸೈರೆಬಲ್ ಬ್ಯೂಚ್ಯುಲರ್…
ಪ್ರಸ್ತುತ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಪ್ರಭಾಸ್ ಯಾವಾಗ ಮದುವೆಯಾಗ್ತಾರೆ ಎಂಬ ಚರ್ಚೆ ಆಗಾಗ ಆಗ್ತಿರುತ್ತದೆ.. ಅನುಷ್ಕಾ ಶೆಟ್ಟಿ ಜೊತೆಗೆ ಅವರ ಹೆಸರು ಅನೇಕ ಬಾರಿ ಕೇಳಿ ಬಂದಿದೆಯಾದ್ರೆ ಈ ಬಗ್ಗೆ ಪ್ರಭಾಸ್ , ಅನುಷ್ಕಾ ಸ್ಪಷ್ಟಪಡಿಸಿಲ್ಲ..
ಇತ್ತೀಚೆಗೆ ಬಾಲಿವುಡ್ ನಟಿ ಕೃತಿ ಸನೋನ್ ಜೊತೆಗೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿದೆ.. ಆದಿಪುರುಷ್ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ..
ಸದ್ಯ ಈ ಸಿನಿಮಾದ ಮೂಲಕ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.. ಅಲ್ಲದೇ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಗುಸು ಗುಸು ಹರಿದಾಡ್ತಿದೆ..
ಪರಮಸುಂದರಿ ಜೊತೆಗೆ ಪ್ರಭಾಸ್ ಲವ್ ಗಾಸಿಪ್ ಬಗ್ಗೆ ಕೊನೆಗೂ ಕೃತಿ ಸ್ಪಷ್ಟನೆ ನೀಡಿದ್ದಾರೆ..
ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ , ಅದು ಪ್ರೀತಿಯೂ ಅಲ್ಲ, ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಸಹ ಅಲ್ಲ. ನಮ್ಮ ತೋಳ (ವರುಣ್ ಧವನ್) ರಿಯಾಲಿಟಿ ಶೋನಲ್ಲಿ ಮಾತನಾಡುತ್ತಾ ತುಸು ಹೆಚ್ಚು ಎಕ್ಸೈಟ್ ಆಗಿ ಕಲ್ಪಿತ ವಿಷಯವಗಳನ್ನು ಮಾತನಾಡಿದ್ದಾರೆ. ಅವರು ತಮಾಷೆಗೆಂದು ಆಡಿದ ಮಾತುಗಳು ಗಂಭೀರ ತಿರುವು ತೆಗೆದುಕೊಂಡು ಬಿಟ್ಟಿವೆ ಎಂದಿದ್ದಾರೆ.
ಕೆಲವು ವೆಬ್ ಸೈಟ್ ಗಳು, ನ್ಯೂಸ್ ಚಾನೆಲ್ ಗಳು ನನ್ನ ಹಾಗೂ ಪ್ರಭಾಸ್ ಮದುವೆ ದಿನಾಂಕ ಘೋಷಿಸುವ ಮೊದಲು ನಾನೇ ಈ ಬಗ್ಗೆ ಸ್ಪಷ್ಟನೆ ನೀಡಿಬಿಡುತ್ತೇನೆ. ನನ್ನ ಹಾಗೂ ಪ್ರಭಾಸ್ ಪ್ರೀತಿಯ ಬಗ್ಗೆ ಹರಿದಾಡುತ್ತಿರುವ ರೂಮರ್ ಗಳು ಸಂಪೂರ್ಣವಾಗಿ ಆಧಾರರಹಿತ. ಅವೆಲ್ಲವೂ ಸುಳ್ಳು ಸುದ್ದಿಗಳು ಎಂದಿದ್ದಾರೆ.