Rashmika : ರಕ್ಷಿತ್ ಓಕೆ..!! ನಾಗಶೌರ್ಯ ಏನ್ ಮಾಡಿದ್ರು..?? ಅವರ ಜೊತೆಗ್ಯಾಕೆ ಕಿರಿಕ್..!?
ರಶ್ಮಿಕಾ ಮಂದಣ್ಣ ಸದಾ ಟ್ರೋಲ್ ಆಗುವ ನಟಿ ಅಂದ್ರೂ ತಪ್ಪಾಗೋದಿಲ್ಲ.. ರಕ್ಷಿತ್ ಶೆಟ್ಟಿ ವಿಚಾರಾವಗಿ ರಶ್ಮಿಕಾ ಮೇಲೆ ಕೋಪವೇ ಜಾಸ್ತಿ.. ಅದ್ರಲ್ಲೂ ಇತ್ತೀಚೆಗೆ ರಶ್ಮಿಕಾ ತಮ್ಮನ್ನ ಬೆಳೆಸಿದ ಕಿರಿಕ್ ಪಾರ್ಟಿ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳದೆ ವ್ಯಂಗ್ಯವಾಡಿ ಇದೀ ಹಿಗ್ಗಾಮುಗ್ಗಾ ಟ್ರೋಲ್ ಆಗ್ತಿದ್ದಾರೆ..
ಆದ್ರೆ ರಶ್ಮಿಕಾ ಕನ್ನಡ ಇಂಡಸ್ಟ್ರಿ ಅಷ್ಟೇ ಅಲ್ಲ ತೆಲುಗು ಇಂಡಸ್ಟ್ರಿಯಲ್ಲೂ ಆಕ್ರೋಶ ಗುರಿಯಾಗುತಿದ್ದಾರೆ ಎನಿಸುತ್ತಿದೆ.. ತೆಲುಗಿನ ಖ್ಯಾತ ಚಲನಚಿತ್ರ ಬರಹಗಾರ ತೋಟಾ ಪ್ರಸಾದ್ ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ರಶ್ಮಿಕಾ ವಿರುದ್ಧ ಗರಂ ಆಗಿದ್ದಾರೆ..
ಒಂದೊಮ್ಮೆ ರಶ್ಮಿಕ ಮಂದಣ್ಣಗೆ ಬ್ರೇಕ್ ಅಪ್ ಆದ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಹೆಸರನ್ನು ಹೇಳಲು ಇಷ್ಟವಿಲ್ಲದಿದ್ದರೆ ಆ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಸರನ್ನು ಹೇಳಬಹುದಿತ್ತು, ಇಲ್ಲದಿದ್ದರೆ ಇತರರ ಹೆಸರನ್ನಾದರೂ ಹೇಳಬಹುದಿತ್ತು ಅಲ್ವಾ..??? ಆಕೆ ಹೆಸರನ್ನು ಹೇಳಿಲ್ಲ ಎಂದರೆ ಬೇಕಂತಲೇ ಇದನ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ..
ಅಷ್ಟೇ ಅಲ್ಲ ತೆಲುಗಿನಲ್ಲೂ ಅವರ ವರ್ತನೆ ಬಗ್ಗೆ ಮಾತನಾಡಿದ್ದು , ಕಿರಿಕ್ ಪಾರ್ಟಿಯಲ್ಲಿ ರಕ್ಷಿತ್ ಶೆಟ್ಟಿ ಇರುವ ಕಾರಣ ಅವರ ಹೆಸರನ್ನು ಹೇಳಲಿಲ್ಲ ಎಂದುಕೊಳ್ಳಬಹುದು.
ಆದ್ರೆ ತೆಲುಗು ಚಿತ್ರರಂಗ ಪ್ರವೇಶಿಸಿದ ಚಲೋ ಚಿತ್ರದ ನಟ ನಾಗಶೌರ್ಯ ಹೆಸರನ್ನೂ ಸಹ ರಶ್ಮಿಕಾ ಹೇಳಿರಲಿಲ್ಲ. ಇತ್ತೀಚೆಗಷ್ಟೆ ಚಲೋ ಚಿತ್ರದ ವಾರ್ಷಿಕೋತ್ಸವದ ಕುರಿತು ಟ್ವೀಟ್ ಮಾಡಿದ್ದ ರಶ್ಮಿಕಾ ಮಂದಣ್ಣ ನಿರ್ದೇಶಕನ ಹೆಸರನ್ನು ಉಲ್ಲೇಖಿಸಿ ನಟ ನಾಗಶೌರ್ಯ ಹೆಸರನ್ನು ಏಕೆ ಟ್ವೀಟ್ ನಲ್ಲಿ ಬರೆಯಲಿಲ್ಲ ಎಂದು ಕಿಡಿಕಾರಿದರು.
ಎಷ್ಟೇ ಬೆಳೆದರೂ ಸಹ ನಮಗೆ ಮೊದಲು ತುತ್ತು ಇಟ್ಟವರನ್ನು ಮರೆಯಬಾರದು, ಕೃತಜ್ಞತೆ ಇರಬೇಕು ಎಂದು ರಶ್ಮಿಕಾ ವಿರುದ್ಧ ತೋಟಾ ಆಕ್ರೋಶ ಹೊರಹಾಕಿದ್ರು..