Rashmika : ಖಜಾನಾ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಡಿಸ್ಮಿಸ್ ಹೊಸ ಅಂಬಾಸಿಡರ್ ತ್ರಿಶಾ
ರಶ್ಮಿಕಾ ಮಂದಣ್ಣಗೆ ಯಾಕೋ ಕೆಟ್ಟ ಟೈಮ್ ಶುರುವಾಗಿದ್ಯಾ ಅನ್ನೋ ಪ್ರಶ್ನೆ ಕಾಡ್ತಿದೆ…
ಬಾಲಿವುಡ್ ನ ಗುಡ್ ಬೈ ಸಿನಿಮಾ ಹೇಳ ಹೆಸರಿಲ್ಲದಂತೆ ಫ್ಲಾಪ್ ಆಯ್ತು..
ಮಿಷನ್ ಮಜ್ನು ಸಿನಿಮಾ ನೇರ ಒಟಿಟಿಗೆ ತರುವ ತಯಾರಿಯಲ್ಲಿ ಮೇಕರ್ಸ್ ಇದ್ದಾರೆ..
ಇನ್ನೂ ರಶ್ಮಿಕಾ ಕಿರಿಕ್ ಪಾರ್ಟಿ ಬಗ್ಗೆ ಮಾಡಿದ್ದ ವ್ಯಂಗ್ಯದಿಂದ ಸಾಕಷ್ಟು ಟ್ರೋಲ್ ಗೂ ಗುರಿಯಾಗಿದ್ದಾರೆ..
ಇದೇ ವಿವಾದಗಳು ಅವರಿಗೆ ಮುಳುವಾದಂತೆ ಕಾಣ್ತಿದೆ..
ಬ್ಯಾನ್ ಮಾಡ ಎಂಬ ಕೂಗುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಪ್ರಮುಖ ಜ್ಯುವೆಲ್ಲರಿ ರೀಟೇಲ್ ಕಂಪನಿ ಖಜಾನಾ ಜ್ಯುವೆಲ್ಲರಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ರಶ್ಮಿಕಾ ಅವರನ್ನು ವಜಾ ಮಾಡಲಾಗಿದೆ ಎನ್ನಲಾಗ್ತಿದೆ..
ಅಕ್ಷಯ ತೃತೀಯದಿಂದ ಪ್ರಾರಂಭಿಸಿ, ರಶ್ಮಿಕಾ ಭಾರತದಾದ್ಯಂತ ಪ್ರಿಂಟ್, ಔಟ್ಡೋರ್ ಮತ್ತು ಟಿವಿ ಜಾಹೀರಾತುಗಳ ಮೂಲಕ ಖಜಾನಾ ಆಭರಣದ ಸುಂದರ ವಿನ್ಯಾಸಗಳನ್ನು ಪ್ರಚಾರ ಮಾಡುತ್ತಿದ್ದರು. ಸದ್ಯ ನಟಿಯ ವಿವಾದಗಳಿಂದ ಕರ್ನಾಟಕ ಇಂಡಸ್ಟ್ರಿಯಲ್ಲಿ ಅವರಿಗೆ ಸಂಪೂರ್ಣ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತಮ್ಮ ರಿಟೇಲ್ ಕಂಪನಿಯ ಇಮೇಜ್ ಕ್ಷೀಣಿಸುತ್ತದೆ ಎಂದುಕೊಂಡ ಖಜಾನೆ ವ್ಯವಸ್ಥಾಪಕರು ರಶ್ಮಿಕಾರನ್ನ ಅಂಬಾಸಿಡರ್ ಸ್ಥಾನದಿಂದ ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ರಶ್ಮಿಕಾ ಬದಲಿಗೆ ತ್ರಿಷಾ ಅವರನ್ನು ನೇಮಿಸುತ್ತಿರುವುದಾಗಿ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.