Raveena tandon : ಹುಲಿ ಫೋಟೋ ಕ್ಲಿಕ್ಕಿಸಿದ KGF 2 ನಟಿಗೆ ಸಂಕಷ್ಟ..!!
KGF 2 ಸಿನಿಮಾ ಮೂಲಕ ಸಖತ್ ಫೇಮ್ ಗಳಿಸಿ ಶೈನ್ ಆದ ನಟಿ ರವೀನಾ ತಂಡನ್ ಗೆ ಇದೀಗ ಸಂಕಷ್ಟವೊಂದು ಎದುರಾಗಿದೆ.. ಹುಲಿಯ ಫೋಟೋ ಕ್ಲಿಕ್ಕಿಸಿದ್ದಕ್ಕೆ ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಲಾಗಿದೆ.
ಬಾಲಿವುಡ್ ನಟಿ ರವೀನಾ ಟಂಡನ್ ಹುಲಿಯ ಫೋಟೋ ಕ್ಲಿಕ್ಕಿಸಿದ್ದೇ ಅವರಿಗೆ ತೊಂದರೆಯಾಗಿದೆ..
ರವೀನಾರಿಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ.. ಇತ್ತೀಚೆಗೆ ಸಫಾರಿಗೆ ತೆರಳಿದ್ದರು. ಸತ್ಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ರವೀನಾ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ನಟಿ ರವೀನಾ ಹುಲಿ ಸಮೀಪ ಹೋಗಿ ವಿಡಿಯೋ ಮಾಡಿದ್ದಾರೆ.. ಹೀಗಾಗಿ ಪ್ರಾಣಿಗಳಿಗೆ ತೊಂದರೆ ಮಾಡಿ ಕಿರಿಕಿರಿ ಉಂಟು ಮಾಡಿದ್ದಾರೆ ಎಂದು ಮೀಸಲು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.
ವಾಹನ ಚಾಲಕ ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳು ಹಾಗೂ ರವೀನಾ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅರಣ್ಯ ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ರವೀನಾ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ನೀಡಿದ್ದು , ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದ ಜೀಪ್ ನಲ್ಲಿಯೇ ನಾನು ಪ್ರಯಾಣಿಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇಲಾಖೆ ಗೊತ್ತುಪಡಿಸಿದ ಪ್ರವಾಸೋದ್ಯಮ ಮಾರ್ಗದಿಂದ ಹೊರಹೋಗಿಲ್ಲ ಎಂದು ಹೇಳಿದ್ದಾರೆ.
ಇಲಾಖೆಯಿಂದ ಒದಗಿಸಲಾದ ತರಬೇತಿ ಪಡೆದ ಮಾರ್ಗದರ್ಶಿಗಳು ಮತ್ತು ಚಾಲಕರು ಸಫಾರಿಯಲ್ಲಿ ಜೊತೆಗಿದ್ದರು ಎಂದು ಹೇಳಿದ್ದಾರೆ.