Shobhana : ಕೇದಾರನಾಥದಲ್ಲಿ ಮಂಜಿನಲ್ಲಿ ಸಿಲುಕಿದ ನಟಿ , ಡ್ಯಾನ್ಸರ್ ಶೋಭನಾ..!!
ಕೇದಾರನಾಥದಲ್ಲಿ ಹಿರಿಯ ನಟಿ ಶೋಭನಾ ದಟ್ಟ ಮಂಜಿನಲ್ಲಿ ಸಿಲುಕಿದ್ದಾರೆ.
ಖ್ಯಾತ ಹಿರಿಯ ನಟಿ ಮತ್ತು ನರ್ತಕಿ ಶೋಭನಾ ತೀರ್ಥಯಾತ್ರೆಯಲ್ಲಿದ್ದು, ದಟ್ಟವಾದ ಮಂಜಿನಲ್ಲಿ ಸಿಲುಕಿದ್ದಾರೆ.
ಕೇದಾರನಾಥ ಯಾತ್ರೆ ಕೈಗೊಂಡಿರುವ ಅವರಿಗೆ ದಟ್ಟವಾದ ಮಂಜಿನಿಂದಾಗಿ ದೇಗುಲ ಭೇಟಿಗೆ ಅಡಚಣೆಯಾಗಿದೆ.
ಉತ್ತರಾಖಂಡ್ ನಿಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೋಭನಾ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅಲ್ಲಿನ ವಾತಾವರಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇಲ್ಲಿನ ಹವಾಮಾನ ತುಂಬಾ ಕಠಿಣವಾಗಿದ್ದು, ಎಲ್ಲೆಡೆ ದಟ್ಟ ಮಂಜು ಆವೃತವಾಗಿದೆ. ದಟ್ಟವಾದ ಮಂಜಿನಿಂದಾಗಿ ಹೆಲಿಕಾಪ್ಟರ್ ತನ್ನನ್ನು ಮತ್ತು ಇತರ ಸಹ-ಪ್ರಯಾಣಿಕರನ್ನು ದೇಗುಲಕ್ಕೆ ಕರೆದೊಯ್ಯಲು ಬರುವುದು ತಡವಾಯಿತು.
ಇಲ್ಲಿ ತುಂಬಾ ಚಳಿಯಿದ್ದು, ಈ ವಾತಾವರಣದಿಂದ ನನಗೆ ಶೀತವಾಗಿದೆ. ಅದು ಕೇದಾರನಾಥ ದೇವಾಲಯ. ಅಲ್ಲಿ ಮಂಜು ತುಂಬಿದೆ. ಮಂಜು ತೆರವಾದ ನಂತರ ವಾಪಸ್ ಆಗುತ್ತೇನೆ ಎಂದು ವಿಡಿಯೋದಲ್ಲಿ ಅವರು ಹೇಳಿಕೊಂಡಿದ್ದಾರೆ.
Shobhana stuck in snow in kedaranath, cinibazaar