The Kashmir Files ವಿರೋಧಿಸಿದ ನಿರ್ದೇಶಕನ ಪರ ಪ್ರಕಾಶ್ ರಾಜ್..!!
ಸದಾ ವಿವಾದಗಳಿಮದಲೇ ಸುದ್ದಿಯಾಗುವ ನಟ ಕಮ್ ರಾಜಕಾರಣಿಯೂ ಅಂದ್ರೆ ಅದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಎನ್ನಬಹುದು.. ಸಾಕಷ್ಟು ಬಾರಿ ವಿವಾದಾತ್ಮಕ ಹೇಳಿಕೆಗಳನ್ನ ನೀಡಿದ್ದಾರೆ..
ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿಸಿ ದಾಖಲೆಗಳ ಮೇಲೆ ದಾಖಲೆಗಳನ್ನ ಬರೆದಿದ್ದ 90 ರ ದಶಕದ ನೈಕ ಘಟನೆಯಾಧಾರಿತ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..
ಹೌದು..!
ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ವಿಭಾಗದ ಜ್ಯೂರಿಯಾಗಿದ್ದ ಇಸ್ರೇಲಿ ನಿರ್ದೇಶಕ ನದಾಲ್, ಭಾರತದ The Kashmir Files ಚಿತ್ರದ ಕುರಿತು ಕೆಟ್ಟದಾಗಿ ಮಾತನಾಡಿದ್ದರು..
ಇಂತಹ ಅಶ್ಲೀಲ, ಕೆಟ್ಟ ಸಿನಿಮಾವನ್ನು ನಾನು ಯಾವತ್ತೂ ಜ್ಯೂರಿಯಾಗಿ ನೋಡಿಲ್ಲ ಎಂದು ಹೇಳಿದ್ದರು.. ಅವರ ಈ ಮಾತಿಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ.. ಜೊತೆಗೆ ಹಲವರು ಪರವಾಗಿಯೂ ಮಾತನಾಡ್ತಿದ್ದಾರೆ..
ಇದೀಗ ನಟ ಪ್ರಕಾಶ್ ರಾಜ್ ಅವರು ಇಸ್ರೇಲಿ ನಿರ್ದೇಶಕನ ಪರವಾಗಿ ನಿಂತಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು , ಕೊನೆಗೂ ಸತ್ಯ ಅಧಿಕೃತವಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.