Kantara : ಹಾಲಿವುಡ್ ನಲ್ಲಿ ‘ಕಾಂತಾರ’ ಕ್ರೇಜ್..!!
ದೇಶ ವಿದೇಶದಲ್ಲಿ ಕಾಂತಾರ ಕ್ರೇಜ್ ಯಾವ ಲೆವೆಲ್ ಗಿದೆ ಅನ್ನೋದನ್ನ ಮತ್ತೊಮ್ಮೆ ಹೇಳೋ ಅವಶ್ಯಕತೆಯಿಲ್ಲ.. 16 ಕೋಟಿ ರೂ ಬಜೆಟ್ ನಲ್ಲಿ ಬಂದು 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಈಗ ಒಟಿಟಿಯಲ್ಲಿ ಅಬ್ಬರಿಸುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸಿನಿಮಾ ಅಬ್ಬರಿಸುತ್ತಿದೆ..
ಹೊಂಬಾಳೆ ಫಿಲಮ್ಸ್ ನಿರ್ಮಾಣದಲ್ಲಿ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗಿ ಧೂಳೆಬ್ಬಿಸಿ ದಾಖಲೆಗಳ ಮೇಲೆ ದಾಖಲೆ ಬರೆದ ಈ ಸಿನಿಮಾ ಇದೀಗ ಇಂಗ್ಲಿಷ್ ಗೂ ಡಬ್ ಆಗಿ ರಿಲೀಸ್ ಆಗಲಿದ್ಯಂತೆ..
ಹೌದು..!
ಇಂಗ್ಲಿಷ್ ಗೆ ಸಿನಿಮಾವನ್ನ ಡಬ್ ಮಾಡುವ ಬಗ್ಗೆ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.. ಈಗಾಗಲೇ ತುಳುಗೂ ಸಿನಿಮಾ ಡಬ್ ಆಗ್ತಿದೆ ಎನ್ನಲಾಗ್ತಿದೆ.. ಇದರ ನಡುವೆ ಸಿನಿಮಾವನ್ನ ಿಂಗ್ಲಿಷ್ ಗೆ ಡಬ್ ಮಾಡಿದಲ್ಲಿ ಮತ್ತಷ್ಟು ಕ್ರೇಜ್ ಹೆಚ್ಚಾಗಲಿದೆ..
ಇಂಗ್ಲಿಷ್ ಗೆ ಡಬ್ ಮಾಡಿ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಮಾಡುಬಹುದು ಎನ್ನಲಾಗ್ತಿದೆ.. ಹೀಗಾದಲ್ಲಿ ಇನ್ನೂ ಹೆಚ್ಚು ಪ್ರೇಕ್ಷಕರನ್ನ ವಿಶ್ವಾದ್ಯಂತ ಕಾಂತಾರ ತಲುಪಲಿದೆ..
ಈ ಮೂಲಕ ಕಾಂತಾರ ಿನ್ನಷ್ಟು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡರೂ ಅಚ್ಚರಿ ಪಡಬೇಕಾಗಿಲ್ಲ..