LIGER : ‘ಹವಾಲಾ’ ಸುಳಿಯಲ್ಲಿ ವಿಜಯ್ – ಇಡಿ ವಿಚಾರಣೆ ನಂತರ ಹೇಳಿದ್ದು ಹೀಗೆ..!!!
Liger …. ಸೆನ್ಷೇಷನಲ್ ಸ್ಟಾರ್… ಟಾಲಿವುಡ್ ನ ರೌಡಿ ಹೀರೋ… ವಿಜಯ್ ದೇವರಕೊಂಡ ನಟನೆ …. ಸೆನ್ಷೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ ನ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ…
ಬೆಟ್ಟದಷ್ಟು ನಿರೀಕ್ಷೆ ಹೊತ್ತು ಬಂದು ಥಿಯೇಟರ್ ಗಳಲ್ಲಿ ಟುಸ್ ಆಗಿದೆ.. ನಿರೀಕ್ಷೆ ಮುಟ್ಟದೇ ಫೇಲ್ ಆಗಿದೆ.. ಬಾಕ್ಸ್ ಆಫೀಸ್ ಶೇಕ್ ಮಾಡದೇ ಇದ್ರು ಪರವಾಗಿಲ್ಲ ಎಂಬಂತೆ ಮೊದಲ ದಿನದ ಕಲೆಕ್ಷನ್ ಇತ್ತಾದ್ರೂ ಸಿನಿಮಾ ಫ್ಲಾಪ್ ಲಿಸ್ಟ್ ಸೇರಿಕೊಂಡಿದೆ..
ಈ ಸಿನಿಮಾದಿಂದ ನಿಜವಾಗಲೂ ನಷ್ಟ ಅನುಭವಿಸಿದವರು ವಿತರಕರು.. ಇದೀಗ ಜಾರಿ ನಿರ್ದೇಶನಾಲಯದಿಂದ ಲೈಗರ್ ನಿರ್ದೇಶಕ , ನಿರ್ಮಾಕರು , ನಟರಿಗೆ ದೊಡ್ಡ ಸಂಕಷ್ಟವೇ ಎದುರಾಗಿದೆ..
ಲೈಗರ್ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಪ್ಯಾನ್ ಇಂಡಿಯನ್ ಸಿನಿಮಾ.. ಈ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿತ್ತು. ಆದ್ರೆ ಅದೆಲ್ಲಾ ನಿರೀಕ್ಷೆ ಹುಸಿಯಾಗಿ.. ಹೀನಾಯದಲ್ಲೇ ಹೀನಾಯವಾಗಿ ಸಿನಿಮಾ ಸೋತಿತ್ತು..
ಆದ್ರೆ ಅಕ್ರಮ ಹಣದಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿರುವ ಇಡಿ ಪುರಿ ಜಗನ್ನಾಥ್ , ಚಾರ್ಮಿ , ದೇವರಕೊಂಡಗೆ ಶಾಕ್ ನೀಡಿದೆ.. ದುಬಾರಿ ಸಂಭಾವನೆ ಪಡೆದಿದ್ದ ವಿಜಯ್ ದೇವರಕೊಂಡ ಇತ್ತೀಚೆಗೆ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.. ನಂತರ ಈ ಬಗ್ಗೆ ಮಾಧ್ಯಮದವರೆದುರಿಗೆ ಬಂದು ಮಾತನಾಡಿದ್ದಾರೆ,..
ಹೈದರಾಬಾದ್ ನಲ್ಲಿರುವ ಇಡಿ ಕಚೇರಿಗೆ ಭೇಟಿ ನೀಡಿ ವಿಚಾರಣೆ ಎದುರಿಸಿದ ನಂತರ ಬಂದು ಮಾತನಾಡಿರುವ ವಿಜಯ್,,,,
ಇದು ನನ್ನ ಕರ್ತವ್ಯ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಭೇಟಿ ಮಾಡಿ ಬಂದೆ. “ಮಹಾನ್ ಜನಪ್ರಿಯತೆಯೊಂದಿಗೆ ಸವಾಲುಗಳು ಬರುತ್ತದೆ ಮತ್ತು ಅದರ ಬಗ್ಗೆ ನೀವು ಏನೂ ಮಾಡಲಾಗುವುದಿಲ್ಲ. ಆದರೆ ನಾನು ಇದನ್ನು ಒಂದು ಅನುಭವವಾಗಿ ನೋಡುತ್ತೇನೆ. ಅವರು ಕರೆದಾಗ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಾನು ಹೋಗಿ ಅವರ ಪ್ರಶ್ನೆಗಳಿಗೆ ಉತ್ತರಿಸಿದೆ” ಎಂದು ವಿಜಯ್ ಹೇಳಿದರು.
ಅವರನ್ನು 12 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ವಿಜಯ್ ಖಚಿತಪಡಿಸಿದ್ದಾರೆ. ಆದರೆ ಅವರನ್ನು ಮತ್ತೆ ಕರೆ ಮಾಡಲಾಗಿದೆಯೇ ಎಂದು ಹೇಳಲಿಲ್ಲ. ಎರಡು ವಾರಗಳ ಹಿಂದೆ, ಚಾರ್ಮಿ , ಪುರಿಯನ್ನೂ ಸಹ ಸುಮಾರು 12 ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು..
— Suresh Kondi (@SureshKondi_) November 30, 2022
#VijayDeverakonda after ED questioning: ‘popularity comes with its own side effects’- ‘It’s an experience it’s life, I did my duty when I was called I came’ pic.twitter.com/sTTBzaI0Ma
— Griha Atul (@GrihaAtul) November 30, 2022