Pavan Kalyan : ‘ಕೂದಲೂ ಕೀಳೋಕಾಗಲ್ಲ’ ಪವನ್ ಕಲ್ಯಾಣ್ ಬಗ್ಗೆ ರೋಜಾ ಮಾತಿಗೆ ಭಾರೀ ಟೀಕೆ..!!
ಆಂಧ್ರಪ್ರದೇಶದಲ್ಲಿ ರಾಜಕೀಯ ಗುದ್ದಾಟ ಜೋರಾಗಿದೆ..
ಆಡಳಿತ ರೂಢ ಪಕ್ಷ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಹಾಗೂ ಸ್ಟಾರ್ ನಟ ಪವನ್ ಕಲ್ಯಾಣ್ ಜನಸೇನಾ ನಡುವೆ ಜಟಾಪಟಿ ಜೋರಾಗ್ತಲೇ ಇದೆ…
ಪವನ್ ಕಲ್ಯಾಣ್ ಸದ್ಯ ಗ್ರಾಮ ೂರೂರುಗಳನ್ನ ಸುತ್ತುತ್ತಾ ಜನರ ಜೊತೆಗೆ ಬೆರೆಯುತ್ತಿದ್ದಾರೆ.. ಜಗನ್ ವಿರುದ್ಧವೂ ಆಕ್ರೋಶವನ್ನ ಹೊರಹಾಕುತ್ತಾ ಇದ್ದಾರೆ ಡೇರಿಂಗ್ ನಟ ಪವನ್..
ಆದ್ರೆ ಇತ್ತೀಚೆಗೆ ಪವನ್ ಕಲ್ಯಾನ್ ಟೀಕಿಸುವ ಭರದಲ್ಲಿ ನಟಿ ಹಾಗೂ ರಾಜಕಾರಣಿಯೂ ಆಗಿರುವ ರೋಜಾ ಪವನ್ ಕಲ್ಯಾಣ್ ವಿರುದ್ಧ ಕೀಳು ಭಾಷೆ ಉಪಯೋಗಿಸಿ ಮಾತನಾಡಿದ್ದು , ಇದೀಗ ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದಾರೆ..
ಜಗನ್ ಸರಕಾರದ ವಿರುದ್ಧ ಪವನ್ ಕಲ್ಯಾಣ್ ಗುಡುಗಿದ್ದಾರೆ.. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರೋಜಾ, ಗನ್ ವಿಚಾರದಲ್ಲಿ ಪವನ್ ಕಲ್ಯಾಣ್ ಒಂದು ಕೂದಲನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಏನೇ ಅರಚಾಡಿದರೂ ಜಗನ್ ಅವರನ್ನು ಏನೂ ಮಾಡಲು ಆಗುವುದಿಲ್ಲ. ಪವನ್ ಕಲ್ಯಾಣ್ ಅವರು ನಾಲಿಗೆಯನ್ನು ಹಿಡಿದಿಟ್ಟುಕೊಂಡು ಮಾತನಾಡಬೇಕು. ಜಗನ್ ಅವರನ್ನು ಮುಟ್ಟುವುದಲ್ಲ, ಅವರ ಕಾಲಿನ ಕಿರುಬೆರಳಿನಲ್ಲಿರುವ ಕೂದಲನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇಪ್ಪಟಂ ಗ್ರಾಮದಲ್ಲಿ ಹಾದು ಹೋಗಿರುವ ಹೈವೆ ಸಂಬಂಧಿಸಿದ ವಿಚಾರವಾಗಿ ಪವನ್ ಸಿಟ್ಟಾಗಿದ್ದು ಆ ಗ್ರಾಮದ ರೈತರ ಪರವಾಗಿ ನಿಂತಿದ್ದು , ಹೋರಾಟ ಮಾಡುತ್ತಾ ಸರ್ಕಾರದ ವಿರುದ್ಧ ಕಿಡಿಕಾರುತ್ತಾ ಬಂದಿದ್ದಾರೆ.. ಇದೇ ವಿಚಾರವಾಗಿ ಶಾಸಕಿ ರೋಜಾ ಈ ರೀತಿ ಕೀಳಾಗಿ ಟೀಕಿಸಿ ಟೀಕೆಗೆ ಗುರಿಯಾಗಿದ್ದಾರೆ..