Rashmika : ಚಷ್ಮಾ ಸುಂದರಿಗೆ ಲಕ್ ಕೈ ಕೊಡ್ತಾ..?? ಐಟಂ ಸಾಂಗ್ ಒಪ್ಪಿದ್ರಂತೆ..!?
ಟಾಲಿವುಡ್ ನಟಿ ರಶ್ಮಿಕಾ ಮಂದಣ್ಣಗೆ ಸದ್ಯ ಸೋಲಿನ ಭೀತಿ ಎದುರಾಗಿದೆ.. ಬಾಲಿವುಡ್ ನಲ್ಲಿ ಮೊದಲ ಸಿನಿಮಾವೇ ಫ್ಲಾಪ್ ಆಗಿದೆ..
ಟ್ರೋಲ್ ಗಳ ಸುಳಿಗೆ ಸಿಲುಕಿದ್ದಾರೆ.. ಬ್ಯಾನ್ ಆಗಬೇಕೆಂಬ ಕೂಗುಗಳು ಕೇಳಿಬರುತ್ತಿದೆ..
ಖಜಾನಾ ಜಿವೆಲರಿ ಅಂಬಾಸಿಡರ್ ಸ್ಥಾನದಿಂದಲೂ ವಜಾಗೊಂಡಿದ್ದಾರೆ.. ಇದೆಲ್ಲಾ ನೋಡ್ತಿದ್ರೆ ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಗಿದೆ ಎಂದೇ ಎನಿಸುತ್ತಿದೆ..
ಅಂದ್ಹಾಗೆ ವಿವಾದಗಳಿಂದಲೇ ಸುದ್ದಿಯಾಗ್ತರುವ ರಶ್ಮಿಕಾ ಇದೀಗ ಸಮಂತಾ ಹಾದಿ ಹಿಡಿದಿದ್ಧಾರೆ..
ಹೌದು..!
ಮೊದಲ ಬಾರಿಗೆ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಸಮಂತಾ ಮುಂದಾಗಿದ್ದಾರೆ ಎನ್ನಲಾಗ್ತಿದೆ..
ಅದ್ರಲ್ಲೂ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಚಿತ್ರದಲ್ಲಿ ಐಟಂ ಡ್ಯಾನ್ಸ್ ಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ ಯಶಸ್ಸಿನ ಉತ್ತುಂಗದಲ್ಲಿರೋವಾಗ ಐಟಂ ಹಾಡಿಗೆ ಹೆಜ್ಜೆ ಹಾಕುವುದು ಯಾಕೆ ಬೇಕಿತ್ತು ಎಂದು ಕೆಲ ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ರೆ , ಎಂದಿನಂತೆ ಮತ್ತೆ ಹಲವರು ನಟಿಯನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಾಯಿದ್ದಾರೆ..
ತ್ರಿವಿಕ್ರಮ್ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು ಜತೆ ಪೂಜಾ ಹೆಗ್ಡೆ, ಶ್ರೀಲೀಲಾ ನಾಯಕಿಯರಾಗಿ ಕಾಣಿಸಿಕೊಳ್ತಿದ್ದಾರೆ. ಇದೇ ಚಿತ್ರದಲ್ಲಿ ರಶ್ಮಿಕಾ ಐಟಂ ಹಾಡಿಗೆ ಹೆಜ್ಜೆ ಹಾಕಲು ಓಕೆ ಅಂದಿದ್ದಾರೆ. ಈ ಮೂಲಕ ಸಮಂತಾ ಅವರದ್ದೇ ದಾರಿ ಹಿಡಿದಿದ್ದಾರೆ..