Rashmika : ರಶ್ಮಿಕಾ ಬ್ಯಾನ್ ಕಷ್ಟ..!! ‘ಆದ್ರೆ ಕನ್ನಡಿಗರು ಈ ತಂತ್ರ ಮಾಡಬಹುದು’..!!
ರಶ್ಮಿಕಾ ಮಂದಣ್ಣ ಸದಾ ಟ್ರೋಲ್ ಆಗುವ ನಟಿ ಅಂದ್ರೂ ತಪ್ಪಾಗೋದಿಲ್ಲ.. ರಕ್ಷಿತ್ ಶೆಟ್ಟಿ ವಿಚಾರಾವಗಿ ರಶ್ಮಿಕಾ ಮೇಲೆ ಕೋಪವೇ ಜಾಸ್ತಿ.. ಅದ್ರಲ್ಲೂ ಇತ್ತೀಚೆಗೆ ರಶ್ಮಿಕಾ ತಮ್ಮನ್ನ ಬೆಳೆಸಿದ ಕಿರಿಕ್ ಪಾರ್ಟಿ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳದೆ ವ್ಯಂಗ್ಯವಾಡಿ ಇದೀ ಹಿಗ್ಗಾಮುಗ್ಗಾ ಟ್ರೋಲ್ ಆಗ್ತಿದ್ದಾರೆ..
ಅವರನ್ನ ಬ್ಯಾನ್ ಮಾಡಬೇಕೆಂಬ ಒತ್ತಾಯವನ್ನೂ ಹೇರಲಾಗುತ್ತಿದೆ..
ಅಂದ್ಹಾಗೆ ಕೇವಲ ಕನ್ನಡ ಅಷ್ಟೇ ಅಲ್ಲದೇ ತೆಲುಗಿನವರೂ ಇದೀಗ ರಶ್ಮಿಕಾ ವಿರುದ್ಧ ಕೆಂಡಕಾರುತ್ತಿದ್ದಾರೆ..
ತೆಲುಗಿನ ಚೆಲ್ಲೋ ಸಿನಿಮಾದ ಸಂದರ್ಭದಲ್ಲಿ ಕೇವಲ ನಿರ್ದೇಶಕರ ಹೆಸರು ಹೇಳಿ ಟ್ವೀಟ್ ಮಾಡಿದ್ದ ರಶ್ಮಿಕಾ ನಾಗ ಶೌರ್ಯ ಹೆಸರನ್ನ ತೆಗೆದುಕೊಂಡಿರಲಿಲ್ಲ.. ರಕ್ಷಿತ್ ಶೆಟ್ಟಿ ಸಿನಿಮಾ ಎಂಬ ಕಾರಣಕ್ಕೆ ಕಿರಿಟ್ ಪಾರ್ಟಿ ಸಿನಿಮಾದ ನಿರ್ಮಾಣ ಸಂಸ್ಥೆ ಹೆಸರೇಳದೇ ವ್ಯಂಗ್ಯವಾಡಿದ್ರೂ ಅಂತ ಹೇಳಬಹುದು.. ಆದ್ರೆ ನಾಗಶೌರ್ಯ ಅವರೊಂದಿಗೆ ಏನು ಸಮಸ್ಯೆ ಇತ್ತು..
ಯಾವತ್ತೂ ನಮಗೆ ಮೊದಲು ತುತ್ತು ಕೊಟ್ಟವರನ್ನ ಮರೆಯಬಾರದು.. ಬೆಳೆಸಿದ ಸಂಸ್ಥೆಯನ್ನ ಮರೆಯಬಾರದು.. ಕೃತಜ್ಞತೆ ಇರಬೇಕೆಂದು ಎಂದು ಸಂದರ್ಶನವೊಂದ್ರಲ್ಲಿ ತೆಲುಗಿನ ಖ್ಯಾತ ಚನಲಚಿತ್ರ ಬರಹಗಾರರಾದ ತೋಟ ಪ್ರಸಾದ್ ಆಕ್ರೋಶ ಹೊರಹಾಕಿದ್ದರು.
ಇದೇ ವೇಳೆ ಬ್ಯಾನ್ ಬಗ್ಗೆ ಮಾತನಾಡಿ.. ಅವರೂ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.. ಅವರನ್ನ ಬ್ಯಾನ್ ಮಾಡೋಕೆ ಸಾಧ್ಯವಿಲ್ಲ..
ಆದ್ರೆ ಕನ್ನಡ ಸಿನಿಮಾ ಪ್ರೇಮಿಗಳು ರಶ್ಮಿಕಾ ಮಂದಣ್ಣ ಚಿತ್ರಗಳನ್ನು ನೋಡದೇ ಇರಲು ನಿರ್ಧರಿಸಬಹುದು.. ಇದರಿಂದ ರಶ್ಮಿಕಾ ಅಭಿನಯದ ಚಿತ್ರಗಳು ಕರ್ನಾಟಕದಲ್ಲಿ ನಷ್ಟ ಅನುಭವಿಸುವಂತೆ ಮಾಡಿ ಸೋಲಿಸಬಹುದು ಎಂದು ತಿಳಿಸಿದರು.