RRR ಗೆ ಒಲಿದ ಮತ್ತೊಂದು ಅಂತರಾಷ್ಟ್ರೀಯ ಪ್ರಶಸ್ತಿ..!!
RRR ಸಿನಿಮಾದ ಮುಡಿಗೆ ಮತ್ತೊಂದು ಅಂತರರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ.
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದ ಟಾಲಿವುಡ್ ನ ಅತಿ ದೊಡ್ಡ ಮಲ್ಟಿಸ್ಟಾರ್ ಚಿತ್ರ RRR, ಮತ್ತೊಂದು ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಈ ಸಿನಿಮಾ ಈಗಾಗಲೇ ಆಸ್ಕರ್ ನಲ್ಲಿ ಹಲವಾರು ವಿಭಾಗಗಳಲ್ಲಿ ನಾಮಿನೇಟ್ ಆಗಿದ್ರೆ, ಸನ್ ಸೆಟ್ ಸರ್ಕಲ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ ಅವಾರ್ಡ್ ಗೆದ್ದುಕೊಂಡಿದೆ.
ನಿರ್ದೇಶಕ ಎಸ್.ಎಸ್. ರಾಜಮೌಳಿ, ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.
RRR ಸಿನಿಮಾಗೆ ಅಂತರಾಷ್ಟ್ರೀಯ ಅವಾರ್ಡ್ ಒಲಿದು ಬರುತ್ತಿರುವುದರಿಂದ ಚಿತ್ರತಂಡ ಮತ್ತು ಅಭಿಮಾನಿಗಳು ಖುಷಿಯಾಗಿದ್ದು, ಈ ಚಿತ್ರವು ಆಸ್ಕರ್ ಪ್ರಶಸ್ತಿ ಪಡೆಯಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.