Vijay Sankeshwar ಅವರ ಬದುಕು ಐಐಎಂ ವಿದ್ಯಾರ್ಥಿಗಳಿಗೆ ಪಠ್ಯ ಆಗಬೇಕು – ಸಿಎಂ ಬೊಮ್ಮಾಯಿ
ಪತ್ರಕರ್ತರು , ಯಶಸ್ವಿ ಉದ್ಯಮಿಗಳೂ ಆಗಿರುವ ವಿಜಯ್ ಸಂಕೇಶ್ವರ್ ರ ವಿ ಆರ್ ಆಲ್ ಟ್ರಾನ್ಸ್ ಪೋರ್ಟೇಷನ್ ಕೂಡ ಬಹಳ ಯಶಸ್ವಿ..
ಆದ್ರೆ ವಿಜಯ್ ಸಂಕೇಶ್ವರ್ ಅವರ ಜೀವನ ಸಾಕಷ್ಟು ಏರಿಳಿತಳಿಂದ ಕೂಡಿದೆ.. ಇವರ ಜೀವನವನ್ನೇ ಸಿನಿಮಾ ಮೂಲಕ ತೆರೆ ಮೇಲೆ ತರುವ ತಯಾರಿ ನಡೆಯುತ್ತಿದೆ..
ಈ ಸಾಧನೆಯ ಕಥೆಯ ಸಿನಿಮಾ ಟೈಟಲ್ಲೇ ವಿಜಯಾನಂದ..
ಈ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು,
ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಬಯೋಪಿಕ್ ಬಗ್ಗೆ ಮಾತನಾಡಿದ್ದಾರೆ..
ವಿಜಯ್ ಸಂಕೇಶ್ವರ್ ಅವರಿಗೆ ಯಶಸ್ಸಿನ ಹಸಿವಿದೆ. ಹೊಸತು ಏನನ್ನಾದರೂ ಮಾಡುತ್ತಲೇ ಇರುತ್ತಾರೆ. ಇಡೀ ಜಗತ್ತು ಎಲ್ಲಿ ಹೋಗಬೇಡ ಅನ್ನುತ್ತೋ, ಯಾವುದು ಮಾಡಬೇಡ ಅನ್ನುತ್ತೋ, ಅದನ್ನೇ ಮಾಡುತ್ತಾರೆ ಎಂದಿದ್ದಾರೆ..
ವಿಜಯ್ ಸಂಕೇಶ್ವರ್ ಕರ್ನಾಟಕ ಕಂಡ ಯಶಸ್ವಿ ಉದ್ಯಮಿ. ಅವರ ಬದುಕು ಐಐಎಂ ವಿದ್ಯಾರ್ಥಿಗಳಿಗೆ ಪಠ್ಯ ಆಗಬೇಕು ಅಂತಲೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಎಂಎಲ್ಸಿ ಆಗಿದ್ದಾಗ, ಅವರು ಇಲ್ಲಿ ಕೂತು ಸಮಯ ವ್ಯರ್ಥ ಮಾಡುವುದಿಲ್ಲ ಎಂದು ರಾಜೀನಾಮೆ ನೀಡಿದ್ದರು. ಅವರ ಕಾಯಕವನ್ನೇ ನಂಬಿದವರು. ಹೀಗಾಗಿ ವಿಜಯಾನಂದ ಸಿನಿಮಾ ಯಶಸ್ವಿಯಾಗಲಿ ಎಂದು ಶುಭ ಕೋರಿದ್ದಾರೆ..
ಸಿನಿಮಾ ಡಿಸೆಂಬರ್ 9 ಕ್ಕೆ ರಿಲೀಸ್ ಆಗಲಿದೆ.. ಈ ಸಿನಿಮಾ 1400 ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಅಲ್ಲದೆ ವಿದೇಶದ ಸುಮಾರು 200 ಸ್ಕ್ರೀನ್ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ವಿಜಯಾನಂದ ಬಯೋಪಿಕ್ ಅನ್ನು ರಿಷಿಕಾ ಶರ್ಮಾ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದ್ರೆ ಇದು ಕನ್ನಡದ ಮೊದಲ ಬಯೋಪಿಕ್ ಸಿನಿಮಾವಾಗಿದೆ..
ಈ ಬಗ್ಗೆ ಚಿತ್ರತಂಡವೇ ಹೇಳಿಕೊಂಡಿದೆ. ಈ ಬಯೋಪಿಕ್ ಅನ್ನು ಮಹಿಳಾ ನಿರ್ದೇಶಕಿಯೊಬ್ಬರು ನಿರ್ದೇಶಿಸಿದ್ದು ಮತ್ತಷ್ಟು ವಿಶೇಷ.
ಅಂದ್ಹಾಗೆ ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ನಟಿಸಿದ್ದಾರೆ. ಇವರೊಂದಿಗೆ ಅನಂತ್ನಾಗ್,ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.