yash : ಮಗಳ ಹೆಸರಲ್ಲಿ ಸಿನಿಮಾ ಪ್ರೊಡಕ್ಷನ್ ಹೌಸ್..!!
ರಾಕಿಂಗ್ ಸ್ಟಾರ್ ಯಶ್ ಅವರ ಮೇನಿಯಾ ಆಲ್ ಓವರ್ ಇಂಡಿಯಾ ಇದೆ.. KGF ನಂತರ ಯಶ್ ನ್ಯಾಷನ್ಲ್ ಸ್ಟಾರ್ ಆಗಿದ್ದು , ದೇಶದ ಮೂಲೆಮೂಲೆಗಳಲ್ಲೂ ರಾಕಿ ಅಭಿಮಾನಿಗಳಿದ್ದಾರೆ..
ಯಶ್ ಸಿನಿಮಾದ ಮುಂದಿನ ಅಪ್ ಡೇಟ್ ಗಳಿಗಾಗಿ ಕಾಯ್ತಿದ್ದಾರೆ..
ಇತ್ತ KGF ನ ಸಕ್ಸಸ್ ನ ನಂತರ ಯಶ್ ಕೆಲ ಪ್ರಾಜೆಕ್ಟ್ ಗಳನ್ನ ಕೈ ಬಿಟ್ಟಿದ್ದರು ಎನ್ನಲಾಗಿದೆ…
ಸದ್ಯ ಯಾವ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಕ್ಯೂರಿಯಾಸಿಟಿ ಬೆನ್ನಲ್ಲೇ ಎಕ್ಸೈಟಿಂಗ್ ನ್ಯೂಸ್
ಒಂದು ಹರಿದಾಡ್ತಿದೆ.. ಮಗಳು ಐರಾ ಹೆಸರಲ್ಲಿ ಯಶ್ ಸಿನಿಮಾ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಸುದ್ದಿ ಸದ್ಯ ಸಖತ್ ಸದ್ದು ಮಾಡ್ತಿದೆ..
ಇದಿನ್ನೂ ಅಧಿಕೃತವಾಗಿಲ್ಲವಾದ್ರೂ ಹೀಗೊಂದು ಖಬರ್ ಗಾಂಧಿ ನಗರದಲ್ಲಿ ಗುಲ್ಲೆಬ್ಬಿಸಿದೆ..
ಅಷ್ಟೇ ಅಲ್ಲ… ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಮಾಡಿ, ಮೊದಲ ಸಿನಿಮಾಗೆ ಖುದ್ದು ಯಶ್ ಅವರೇ ನಾಯಕರಾಗಲಿದ್ದಾರೆ ಎನ್ನಲಾಗ್ತಿದೆ..