Shreeleela : ರಶ್ಮಿಕಾ , ಪೂಜಾಗಿಂತ ಡಿಮ್ಯಾಂಡ್ ಕನ್ನಡತಿ ಲೀಲಾಗೆ..!!
ಒಂದೆಡೆ ವಿವಾದಗಳ ಸುಳಿಯಲ್ಲಿ ಸಿಲುಕಿರುವ ರಶ್ಮಿಕಾ ಮೊದಲ ಬಾಲಿವುಡ್ ಸಿನಿಮಾ ಸೋತುಹೋಗಿದೆ.. ಬ್ಯಾಡ್ ಲಕ್ ಶುರುವಾಗಿದೆ ಅಂತೆಲ್ಲಾ ಹೇಳುತ್ತಿರುವಾಗ , ಬ್ಯಾಕ್ ಟು ಬ್ಯಾಕ್ ಸೋಲುಂಡ ಕನ್ನಡತಿ ಪೂಜಾ ಹೆಗ್ಡೆ ಅವರ ಪರಿಸ್ಥಿತಿಯೂ ಹೀಗೇ ಇದೆ..
ಆದ್ರೆ ಇವರಿಬ್ಬರನ್ನೂ ಹಿಂದಿಕ್ಕಿ ಮತ್ತೊಬ್ಬ ಕನ್ನಡತಿ ಮುನ್ನುಗುತ್ತಿದ್ದಾರೆ.. ಅಂದ್ಹಾಗೆ ಕನ್ನಡದ ಚೆಲುವೆ ಶ್ರೀಲೀಲಾಗೆ ಡಿಮ್ಯಾಂಡ್ ಹೆಚ್ಚಾಗಿದೆ.. ಒಂದಲ್ಲ ಎರೆಡಲ್ಲ ಬರೋಬ್ಬರಿ 7 ತೆಲುಗು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ..
ಕನ್ನಡದ ಕಿಸ್, ಭರಾಟೆ, ಬೈಟು ಲವ್ ಮೂರು ಚಿತ್ರಗಳಲ್ಲಿ ನಟಿಸಿ ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗಿನಲ್ಲಿ ಗುರುತಿಸಿಕೊಂಡ ಶ್ರೀಲೀಲಾ
ಬ್ಯಾಕ್ ಟು ಬ್ಯಾಕ್ 7 ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಸ್ಟಾರ್ ಹೀರೋಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
ಧಮಾಕಾ, ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಚಿತ್ರ, ಬೋಯಾಪತಿ ಶ್ರೀನಿವಾಸ್ ಹಾಗೂ ರಾಮ್ ಪೋತಿನೇನಿ ಕಾಂಬಿನೇಶನ್‌ನ ಚಿತ್ರ, ನಿತಿನ್ ಅಭಿನಯದ 32ನೇ ಚಿತ್ರ, ವೈಷ್ಣವ್ ತೇಜಾ ಅಭಿನಯದ 4ನೇ ಚಿತ್ರ, ಅನಗನಗಾ ಒಕ ರೋಜು, ನಂದಮೂರಿ ಬಾಲಕೃಷ್ಣ ನಟನೆಯ 108ನೇ ಚಿತ್ರ. ಮಹೇಶ್ ಬಾಬು ಚಿತ್ರಕ್ಕೆ ಶ್ರೀಲೀಲಾ 2ನೇ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.