Varaha Roopam : ಕಾಂತಾರಗೆ ನಿಲ್ಲದ ಸಂಕಷ್ಟ – ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿದ ಕೇರಳ ಹೈಕೋರ್ಟ್..!!
ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ.. ಒಟಿಟಿಯಲ್ಲೂ ಕಾಂತಾರ ಹವಾ ಕ್ರಿಯೇಟ್ ಆಗಿದೆ.
ಕಾಂತಾರದ ವರಾಹ ರೂಪಂ ಹಾಡು ಮಲಯಾಳಂನ ಆಲ್ಬಂ ಸಾಂಗ್ ಥೈಕುಡಂ ಬ್ರಿಡ್ಜ್ ನ ನವರಸಂ ಟ್ಯೂನ್ ನಿಂದ ಕದ್ದದ್ದು ಎಮದು ಆರೋಪಿ ಕೋರ್ಟ್ ಅಂಗಳಕ್ಕೆ ಪ್ರಕರಣ ತಲುಪಿತ್ತು..
ಕೇರಳ ನ್ಯಾಯಾಲಯವು ಹಾಡಿನ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದ ನಂತರ ಹಾಡನ್ನ ಯೂಟ್ಯೂಬ್ ನಿಂದಲೂ ಡಿಲೀಟ್ ಮಾಡಲಾಗಿತ್ತು..
ಕೇರಳ ಹೈಕೋರ್ಟ್ ನಲ್ಲೂ ಹೊಂಬಾಳೆ ಫಿಲಮ್ಸ್ ಗೆ ಸೋಲಾಗಿತ್ತು..
ಒಟಿಟಿಗೆ ಬಂದ ಸಿನಿಮಾದಲ್ಲಿ ವರಾಹ ರೂಂ ಟ್ಯೂನ್ ಬದಲಾಯಿಸಲಾಗಿದೆ.. ಆದ್ರೆ ಒರಿಜಿನಲ್ ಟ್ಯೂನ್ ನೇ ಜನರು ಇಷ್ಟಡಪ್ತಿದ್ದು , ಅದೇ ಟ್ಯೂಬ್ ಗಾಗಿ ಡಿಮ್ಯಾಂಡ್ ಮಾಡ್ತಿದ್ದರು..
ಆದ್ರೆ ಜಿಲ್ಲಾ ನ್ಯಾಯಾಲಯ ಥೈಕುಡಮ್ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿತ್ತು.. ಈ ಮೂಲಕ ಕಾಂತಾರಗೆ ಜಯವಾಗಿತ್ತಾದ್ರೂ ಮತ್ತೆ ಸಂಕಷ್ಟ ಎದುರಾಗಿದೆ..
ಕೃತಿಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಹೊಂಬಾಳೆ ಬ್ಯಾನರ್, ರಿಷಬ್ ಶೆಟ್ಟಿ, ಪೃಥ್ವಿರಾಜ್ ಫಿಲ್ಮ್ಸ್, ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಗೂಗಲ್ ಇಂಡಿಯಾ ಹೆಡ್ ಆಫೀಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇತರರಿಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಥೈಕುಡಂ ಬ್ರಿಡ್ಜ್ ಹೈಕೋರ್ಟ್ನಲ್ಲಿ ದಾವೆ ಹೂಡಿತ್ತು. ಇದೀಗ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ..