Biggboss ಗೆ ಹೋಗುವವರು ಕೆಲಸಕ್ಕೆ ಬಾರದೇ ಇರೋರು – ಅಶ್ನೀರ್ ಗ್ರೋವರ್
ಬಿಗ್ ಬಾಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ.. ಎಲ್ಲಾ ಭಾಷೆಯಲ್ಲೂ ಸಿಕ್ಕಾಪಟ್ಟೆ ಕ್ರೇಜ್ ಇರುವ ಶೋ..
ಆದ್ರೆ ಈ ಶೋಗೆ ಬರುವವರು ಕೆಲಸಕ್ಕೆ ಬಾರದವರು ಎಂದಿದ್ದಾರೆ ಖ್ಯಾತ ಉದ್ಯಮಿ ಭಾರತ್ ಪೇ ಸಂಸ್ಥಾಪಕ ಅಶ್ಮೀರ್ ಗ್ರೋವರ್..
ಈ ಹಿಂದೆ ‘ಶಾರ್ಕ್ ಟ್ಯಾಂಕ್’ ಹೆಸರಿನ ರಿಯಾಲಿಟಿ ಶೋನಲ್ಲಿ ಅಶ್ನೀರ್ ಗ್ರೋವರ್ ಭಾಗವಹಿಸಿದ್ದರು. ಅಲ್ಲಿಂದ ಜನಪ್ರಿಯತೆ ಗಳಿಸಿ ಸೆಲೆಬ್ರಿಟಿ ಪಟ್ಟ ಗಿಟ್ಟಿಸಿಕೊಂಡಿದ್ದರು..
‘ಶಾರ್ಕ್ ಟ್ಯಾಂಕ್’ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು. ಇದೀಗ ಶಾರ್ಕ್ ಟ್ಯಾಂಕ್ ಎರಡನೇ ಭಾಗ ಪ್ರಸಾರವಾಗುತ್ತಿದ್ದು, ಮೊದಲ ಭಾಗದಲ್ಲಿದ್ದ ಅಶ್ನೀರ್ ಗ್ರೋವರ್ ಅನ್ನು ಶೋನಿಂದ ಕೈಬಿಡಲಾಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಶ್ನೀರ್ ಗ್ರೋವರ್,
”ಅವರಿಗೆ ನನಗೆ ಸಂಭಾವನೆ ನೀಡುವುದು ಮಾತ್ರವೇ ಸಮಸ್ಯೆ ಅಲ್ಲ. ನನ್ನ ಸ್ಟೇಟಸ್ ಗೆ ಆ ಶೋ ಹೊಂದಿಕೆ ಆಗುವುದು ಸಹ ಮುಖ್ಯ ವಿಷಯವಾಗುತ್ತದೆ” ಎಂದಿದ್ದರು.
ಬಿಗ್‌ಬಾಸ್ ಬಗ್ಗೆಯೂ ಮಾತನಾಡಿರುವ ಅಶ್ನೀರ್ ಗ್ರೋವರ್, ”ಬಿಗ್‌ಬಾಸ್‌ನಿಂದಲೂ ಅವಕಾಶ ಬಂದಿತ್ತು ಆದರೆ ಬಿಗ್‌ಬಾಸ್‌ಗೆ ಕೇವಲ ಕೆಲಸಕ್ಕೆ ಬಾರದವರು, ಜೀವನದಲ್ಲಿ ಸಾಧಿಸಲಾರದೆ ಸೋತವರು ಮಾತ್ರ ಹೋಗುತ್ತಾರೆ. ಹಾಗಾಗಿ ನಾನು ಶೋನಲ್ಲಿ ಭಾಗವಹಿಸುವುದಿಲ್ಲ” ಎಂದು ಹೇಳಿದೆ ಎಂದಿದ್ದಾರೆ.