Haripriya : ವಸಿಷ್ಠ ‘ಸಿಂಹ’ ತೊಳಿನಲ್ಲಿ ಕಂದ ‘ಹರಿ’ಪ್ರಿಯ
ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಜೋಡಿಗಳದ್ದೇ ಸದ್ದು..
ವಸಿಷ್ಠ ಸಿಂಹ… ಹರಿಪ್ರಿಯರ ಪ್ರೀತಿ , ಪ್ರೇಮ , ಮದುವೆಯದ್ದೇ ಚರ್ಚೆ..
ಈ ಇಬ್ಬರೂ ಈಗಾಗಲೇ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿದ್ದು , ಇದೀಗ ಶೀಘ್ರವೇ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
ಇದೆಲ್ಲಾ ವಿಚಾರವೂ ಗಾಸಿಪ್ ಗಳೂ ಇರಬಹುದೇನೋ ಅನ್ನೋ ಅನುಮಾನ ಹೊಂದಿದ್ದವರಿಗೆ ಇದೀಗ ಅನುಮಾನವನ್ನ ಖುದ್ದು ಈ ಇಬ್ಬರೇ ದೂರ ಮಾಡಿದ್ದಾರೆ.. ಆದ್ರೂ ವಿಭಿನ್ನವಾಗಿ ಹೇಳಿಕೊಂಡಿದ್ದಾರೆ..
ಹರಿಪ್ರಿಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಹಳ ಮುದ್ದಾದ ಫೋಟೋವನ್ನ ಹಂಚಿಕೊಂಡಿದ್ದಾರೆ.. ಈ ಫೋಟೋ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಅವರು ಕೊಟ್ಟ ಕ್ಯಾಪ್ಷನ್ ಸದ್ಯ ಗಮನ ಸೆಳೆಯುತ್ತಿದೆ.. ಅಲ್ಲದೇ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಇತ್ತ ವಸಿಷ್ಠ ಸಿಂಹ ಕೂಡ ಇದೇ ಫೋಟೋವನ್ನೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಗಾಸಿಪ್ ಅಲ್ಲ ಇಬ್ಬರೂ ಪ್ರೀತಿಸುತ್ತಿರುವುದು ನಿಜ ಎಂದು ಪರೋಕ್ಷವಾಗಿ ಖಚಿತಪಡಿಸಿದ್ದಾರೆ..
ಒಟ್ಟಾರೆ ಈ ಜೋಡಿಗಾಗಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ..
View this post on Instagram