Kantara : ಮತ್ತೆ ‘ವರಾಹ ರೂಪಂ’ ಮಿಸ್ ಮಾಡಿಕೊಂಡಿದ್ದವರಿಗೆ ಗುಡ್ ನ್ಯೂಸ್..!!
ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ.. ಒಟಿಟಿಯಲ್ಲೂ ಕಾಂತಾರ ಹವಾ ಕ್ರಿಯೇಟ್ ಆಗಿದೆ.
ಕಾಂತಾರದ ವರಾಹ ರೂಪಂ ಹಾಡು ಮಲಯಾಳಂನ ಆಲ್ಬಂ ಸಾಂಗ್ ಥೈಕುಡಂ ಬ್ರಿಡ್ಜ್ ನ ನವರಸಂ ಟ್ಯೂನ್ ನಿಂದ ಕದ್ದದ್ದು ಎಮದು ಆರೋಪಿ ಕೋರ್ಟ್ ಅಂಗಳಕ್ಕೆ ಪ್ರಕರಣ ತಲುಪಿತ್ತು..
ಕೇರಳ ನ್ಯಾಯಾಲಯವು ಹಾಡಿನ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದ ನಂತರ ಹಾಡನ್ನ ಯೂಟ್ಯೂಬ್ ನಿಂದಲೂ ಡಿಲೀಟ್ ಮಾಡಲಾಗಿತ್ತು..
ಕೇರಳ ಹೈಕೋರ್ಟ್ ನಲ್ಲೂ ಹೊಂಬಾಳೆ ಫಿಲಮ್ಸ್ ಗೆ ಸೋಲಾಗಿತ್ತು..
ಒಟಿಟಿಗೆ ಬಂದ ಸಿನಿಮಾದಲ್ಲಿ ವರಾಹ ರೂಂ ಟ್ಯೂನ್ ಬದಲಾಯಿಸಲಾಗಿದೆ.. ಆದ್ರೆ ಒರಿಜಿನಲ್ ಟ್ಯೂನ್ ನೇ ಜನರು ಇಷ್ಟಡಪ್ತಿದ್ದು , ಅದೇ ಟ್ಯೂಬ್ ಗಾಗಿ ಡಿಮ್ಯಾಂಡ್ ಮಾಡ್ತಿದ್ದರು..
ಆದ್ರೆ ಜಿಲ್ಲಾ ನ್ಯಾಯಾಲಯ ಥೈಕುಡಮ್ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿತ್ತು.. ಈ ಮೂಲಕ ಕಾಂತಾರಗೆ ಜಯವಾಗಿತ್ತಾದ್ರೂ ಮತ್ತೆ ಸಂಕಷ್ಟ ಎದುರಾಗಿತ್ತು..
ಕೃತಿಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು..
ಆದ್ರೆ ಈ ಪ್ರಕರಣಕ್ಕೆ ಕೊನೆಗೂ ಒಂದು ಅಂತ್ಯ ಸಿಕ್ಕಿದ್ದು , ಅಂತಿಮ ತೀರ್ಪೂ ಬಂದಿದೆ..
ಯೂಟ್ಯೂಬ್ ನಲ್ಲಿ ವಾಪಸ್ ಹಾಡು ಬರುತ್ತಿದೆ ಎಂದು ಸಿನಿಮಾ ತಮಡ , ರಿಷಬ್ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದು , ಕಾಂತಾರಕ್ಕೆ ಜಯ ಸಿಕ್ಕಂತಾಗಿದೆ..
ಈ ಹಿಂದೆ
ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಚಿತ್ರದಲ್ಲೂ ಸಹ ವರಾಹ ರೂಪಂ ಹಾಡಿನ ಟ್ಯೂನ್ ಅನ್ನು ಸಂಪೂರ್ಣವಾಗಿ ಬದಲಿಸಲಾಗಿತ್ತು. ಹೀಗಾಗಿ ಮತ್ತೆ ಈ ಹಾಡನ್ನು ಕೇಳಲಾಗುವುದಿಲ್ಲವ ಎಂಬ ಬೇಸರ ಪ್ರೇಕ್ಷಕರಲ್ಲಿ ಮೂಡಿತ್ತು. ಆದರೆ ಇದೀಗ ತೆಗೆಯಲ್ಪಟ್ಟಿದ್ದ ವರಾಹ ರೂಪಂ ಹಾಡು ಮತ್ತೆ ಬಂದಿದ್ದು, ಇಷ್ಟು ದಿನ ಹಾಡನ್ನು ಮಿಸ್ ಮಾಡಿಕೊಂಡವರು ಈ ಹಾಡನ್ನ ಪುನಃ ಕೇಳಬಹುದು..